ಬೆಂಗಳೂರು : ದೆಹಲಿಯಲ್ಲಿ ರಾಹುಲ್ ಗಾಂಧಿ ಎಂಬ ಸೈನಿಕನಿದ್ದಾನೆ. ನಿಮ್ಮ ಸಮಸ್ಯೆಗಳನ್ನು ಸಂಸತ್ತಿನಲ್ಲಿ ಮಂಡಿಸಲು ಆತ ಸದಾ ಸಿದ್ಧನಿರುತ್ತಾನೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ.
ಭಾರತ್ ಜೋಡೋ ನ್ಯಾಯ ಯಾತ್ರೆಯ 4ನೇ ದಿನವಾದ ಇಂದು, ನಾಗಾಲ್ಯಾಂಡ್ನ ಮೊಕೊಕ್ಚುಂಗ್ನ ಜನರೊಂದಿಗೆ ರಾಹುಲ್ ಗಾಂಧಿ ಸಂವಾದ ನಡೆಸಿದ್ದಾರೆ.
ನಾಗಾ ಶಾಂತಿ ಒಪ್ಪಂದದ ಕುರಿತಂತೆ ಪ್ರಧಾನಿ ಮೋದಿ ನಾಗಾಲ್ಯಾಂಡ್ ಜನರಿಗೆ ಸುಳ್ಳು ಭರವಸೆ ನೀಡಿ ದ್ರೋಹ ಬಗೆದಿದ್ದಾರೆ. ನಿಮ್ಮ ಬಳಿ ಸಮಸ್ಯೆಗೆ ಪರಿಹಾರವಿಲ್ಲದಿದ್ದರೆ, ಇದೆ ಎನ್ನುವ ಹಾಗೆ ನಾಟಕ ಮಾಡಬೇಡಿ ಎಂದು ಟೀಕಿಸಿದ್ದಾರೆ.
ನನಗೆ ನಾಚಿಕೆಯಾಗುತ್ತಿದೆ
ಒಬ್ಬ ಭಾರತೀಯನಾಗಿ ನಮ್ಮ ಪ್ರಧಾನಿ ಮಣಿಪುರಕ್ಕೆ ಹೋಗದಿದ್ದಕ್ಕೆ ನನಗೆ ನಾಚಿಕೆಯಾಗುತ್ತಿದೆ. ನಾಗಾಲ್ಯಾಂಡ್, ಮಣಿಪುರ ಮತ್ತು ಅಸ್ಸಾಂ ಅಭಿವೃದ್ಧಿಯಿಂದ ದೂರ ಉಳಿದಿವೆ. ಇವುಗಳನ್ನು ಮುನ್ನೆಲೆಗೆ ತರುವುದೇ ಕಾಂಗ್ರೆಸ್ ಪಕ್ಷದ ಆಶಯವಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
PM Modi has failed the people of Nagaland.#NYAYforNagaland pic.twitter.com/RKjqKh7FIT
— Congress (@INCIndia) January 17, 2024