ಬೆಂಗಳೂರು : ಅಫ್ಘಾನಿಸ್ತಾನ ವಿರುದ್ಧದ 3ನೇ ಹಾಗೂ ಅಂತಿಮ ಟಿ-20 ಪಂದ್ಯದಲ್ಲಿ ಭಾರತ ತಂಡ ಸಂಕಷ್ಟಕ್ಕೆ ಸಿಲುಕಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯುತ್ತಿದ್ದು, ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಮಾಡುತ್ತಿದೆ. ಆದರೆ, ಭಾರತದ ಲೆಕ್ಕಾಚಾರವನ್ನು ಅಫ್ಘಾನಿಸ್ತಾನ ಬೌಲರ್ಗಳು ಉಲ್ಟಾ ಮಾಡಿದ್ದಾರೆ.
ಇನ್ನಿಂಗ್ಸ್ ಆರಂಭಿಸಿದ ಭಾರತ ಕೇವಲ 22 ರನ್ ಗಳಿಸುವಷ್ಟರಲ್ಲೇ ಪ್ರಮುಖ 4 ವಿಕೆಟ್ ಕಳೆದುಕೊಂಡಿದೆ. ಇನ್ನಿಂಗ್ಸ್ನ ಮೂರನೇ ಓವರ್ನಲ್ಲಿ ಆರಂಭಿಕ ಯಶಸ್ವಿ ಜೈಸ್ವಾಲ್ ಕೇವಲ 4 ರನ್ಗಳಿಗೆ ವಿಕೆಟ್ ಒಪ್ಪಿಸಿದ್ದಾರೆ. ಬಳಿಕ ಕ್ರೀಸ್ಗೆ ಬಂದ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟಾದರು.
ಕಳೆದೆರಡು ಪಂದ್ಯಗಳಲ್ಲಿ ಸತತ ಎರಡು ಅರ್ಧಶತಕ ಸಿಡಿಸಿ ಹೀರೋ ಎನಿಸಿಕೊಂಡಿದ್ದ ಶಿವಂ ದುಬೆ ಈ ಪಂದ್ಯದಲ್ಲಿ ಕೇವಲ 1 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಬಹಳ ದಿನಗಳ ನಂತರ ಟಿ-20 ತಂಡದಲ್ಲಿ ಅವಕಾಶ ಪಡೆದ ಸಂಜು ಸ್ಯಾಮ್ಸನ್ ಮೊದಲ ಎಸೆತದಲ್ಲೇ ಕ್ಯಾಚ್ ನೀಡಿ ಶೂನ್ಯಕ್ಕೆ ಔಟಾದರು.
30 ರನ್ 4 ವಿಕೆಟ್ ಪತನ
ಪವರ್‌ಪ್ಲೇ ಅಂತ್ಯಕ್ಕೆ ಭಾರತ 4 ವಿಕೆಟ್ ನಷ್ಟಕ್ಕೆ 30 ರನ್ ಗಳಿಸಿದೆ.. ಪವರ್‌ಪ್ಲೇಯಲ್ಲಿ ಭಾರತ ಪ್ರಮುಖ ಆಟಗಾರರಾದ ಜೈಸ್ವಾಲ್, ವಿರಾಟ್ ಕೊಹ್ಲಿ, ಶಿವಂ ದುಬೆ ಮತ್ತು ಸಂಜು ಸ್ಯಾಮ್ಸನ್ ವಿಕೆಟ್ ಕಳೆದುಕೊಂಡು, ಸಂಕಷ್ಟದಲ್ಲಿದೆ. ಅಫ್ಘಾನಿಸ್ತಾನ ಪರ ಫರೀದ್ ಅಹ್ಮದ್ ಮಲಿಕ್ 3 ಮತ್ತು ಉಮರ್ಜಾಯ್ 1 ವಿಕೆಟ್ ಪಡೆದು ಮಿಂಚಿದರು. ನಾಯಕ ರೋಹಿತ್ ಶರ್ಮಾ ಅಜೇಯ 27 ಹಾಗೂ ರಿಂಕು ಸಿಂಗ್ ಅಜೇಯ 19 ರನ್ ಗಳಿಸಿ ಕ್ರೀಸ್ನಲ್ಲಿದ್ದಾರೆ. ಪ್ರಸ್ತುತ 11.3 ಓವರ್ಗಳಲ್ಲಿ ಭಾರತ 4 ವಿಕೆಟ್ ಕಳೆದುಕೊಂಡು 68 ರನ್ ಗಳಿಸಿದೆ.