Sunday, November 3, 2024

ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ: ಗಗನಕ್ಕೆರಿದ ಭೂಮಿ ಬೆಲೆ!

ಅಯೋಧ್ಯೆ: ಜನವರಿ 22 ರಂದು ಅಯೋಧ್ಯೆಯ ರಾಮಮಂದಿರ ಉದ್ಘಾಟನೆ ನಡೆಯಲಿದೆ. ಈ ಹಿನ್ನೆಲೆ ರಾಮಮಂದಿರದಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆಗೂ ಮುನ್ನವೇ ಭೂಮಿಯ ಬೆಲೆಯಲ್ಲಿ ಭಾರಿ
ಏರಿಕೆಯಾಗಿದೆ. ರಿಯಲ್ ಎಸ್ಟೇಟ್ ತಜ್ಞರ ಪ್ರಕಾರ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ನಿರ್ಧಾರದಿಂದ ಭೂಮಿಯ ಬೆಲೆ ಗಗನಕ್ಕೇರಿದೆ.

ಇತ್ತೀಚೆಗೆ, ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅಯೋಧ್ಯೆಯ ರಾಮಮಂದಿರದ ಬಳಿ 7 ಸ್ಟಾರ್ ಎನ್‌ ಕ್ಲೇವ್ ‘ದಿ. ಸರಯು’ದಲ್ಲಿ ಪ್ಲಾಟ್ ಖರೀದಿಸಿದ್ದಾರೆ. ಇದರ ಬೆಲೆ ಸುಮಾರು 14.5 ಕೋಟಿ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ, ಈ ಪ್ಲಾಟ್ ಸುಮಾರು 10,000 ಚದರ ಅಡಿಗಳಷ್ಟು ವಿಸ್ತಾರವಾಗಿದೆ.
ಪ್ರತಿ ಚದರ ಅಡಿಗೆ 2000 ರೂ.ನಿಂದ 8000 ರೂ. ವರದಿಯ ಪ್ರಕಾರ. ಪ್ರಸ್ತುತ ಅಯೋಧ್ಯೆಯಲ್ಲಿ ಕಮರ್ಷಿಯಲ್ ಪ್ರಾಪರ್ಟಿ ಉತ್ತುಂಗಕ್ಕೇರಿದೆ. ಅಯೋಧ್ಯ ರಾಮ ಮಂದಿರ ನಿರ್ಮಾಣದ ಮೊದಲ ವರ್ಷವಾದ 2019 ರಲ್ಲಿ ಚದರ ಅಡಿಗೆ 2000 ರೂಪಾಯಿ ಇದ್ದ ಬೆಲೆಗಳು ಈಗ ಪ್ರತಿ ಚದರ ಅಡಿಗೆ 8000 ರೂಪಾಯಿಗೆ ಏರಿಕೆಯಾಗಿದೆ.

ಇದನ್ನೂ ಓದಿ: ರಾಮಮಂದಿರ ಪ್ರಾಣಪ್ರತಿಷ್ಠೆ ಕಾರ್ಯಕ್ರಮಕ್ಕೆ MS ಧೋನಿಗೆ ಆಹ್ವಾನ

ದೇವಾಲಯಗಳ ನಗರಿ ಅಯೋಧ್ಯೆಯಲ್ಲಿ ಕಮರ್ಷಿಯಲ್ ಪ್ರಾಪರ್ಟಿಗೆ ಬೇಡಿಕೆ ತುಂಬಾ ಹೆಚ್ಚಾಗಿದೆ. ಹೆಚ್ಚಿನ ಹೂಡಿಕೆದಾರರು ಈ ಆಸ್ತಿಗಳಲ್ಲಿ ಹಣವನ್ನು ಹೂಡಿಕೆ ಮಾಡಲು ಬಯಸುತ್ತಾರೆ. ಅಯೋಧ್ಯೆಯ ದೇವಕಾಲಿಯಲ್ಲಿ 18,000 ಚದರ ಅಡಿಯ ವಾಣಿಜ್ಯ ನಿವೇಶನವನ್ನು 18 ಕೋಟಿ ರೂ.ಗೆ ಪಟ್ಟಿ ಮಾಡಲಾಗಿದೆ. ಇದರ ಬೆಲೆ ಪ್ರತಿ ಚದರ ಅಡಿಗೆ ಸುಮಾರು 10,000 ರೂ. ಅದೇ ರೀತಿ ಅಯೋಧ್ಯೆಯ ನವೀನ್ ಮಂಡಿ ಸ್ಥಳದಲ್ಲಿ 35,500 ಚದರ ಅಡಿಯ ವಾಣಿಜ್ಯ ನಿವೇಶನ 32 ಕೋಟಿ ರೂ.ಗೆ ಲಭ್ಯವಿದೆ. ಅಂದರೆ ಇದಕ್ಕೆ ಪ್ರತಿ ಚದರ ಅಡಿಗೆ 9,014 ರೂ. ದರ ಕೇಳಲಾಗಿದೆ.

ಅಯೋಧ್ಯಾ ಇಂಡಸ್ಟ್ರೀಯಲ್ ಡೆವಲಪರ್ಸ್ ಸಂಸ್ಥಾಪಕ ರಾಘವೇಂದ್ರ ಶುಕ್ಲಾ ಪ್ರಕಾರ, ಆಸ್ತಿ ಮೌಲ್ಯ ವೇಗವಾಗಿ ಹೆಚ್ಚುತ್ತಿವೆ. ಭಾರತದಾದ್ಯಂತ ಕಮರ್ಷಿಯಲ್ ಪ್ರಾಪರ್ಟಿ ಹುಡುಕುತ್ತಿರುವ ಜನರಿಂದ ನಾವು ಕರೆಗಳನ್ನು ಸ್ವೀಕರಿಸುತ್ತಿದ್ದೇವೆ. ಅಯೋಧ್ಯೆಯಲ್ಲಿ ಹೊಸ ಉದ್ಯಮಗಳು ಪ್ರಾರಂಭವಾಗುತ್ತಿವೆ. ಹೋಟೆಲ್ ಉದ್ಯಮಕ್ಕಾಗಿ ಇಲ್ಲಿ ಭೂಮಿಗೆ ಗರಿಷ್ಠ ಬೇಡಿಕೆಯಿದೆ. ಇದಲ್ಲದೆ, ಅನೇಕ ದೊಡ್ಡ ಬ್ರಾಂಡ್‌ಗಳು ಮತ್ತು ಔಟ್‌ಲೆಟ್ಗಳು ಸಹ ಅಯೋಧ್ಯೆಗೆ ಬರಲು ಬಯಸುತ್ತವೆ ಎಂದರು.

RELATED ARTICLES

Related Articles

TRENDING ARTICLES