Friday, November 22, 2024

ಮಕರ ಸಂಕ್ರಾತಿ ಹಬ್ಬದ ವಿಶೇಷತೆ ಹಾಗು ಶುಭಗಳಿಗೆ ಕುರಿತು ಕಾಲಜ್ಞಾನ ಮಠದ ಶ್ರೀಗಳ ವಿಶ್ಲೇಷಣೆ!

ಸೂರ್ಯನಾರಾಯಣ ಸ್ವಾಮಿಯು ಧನುರ್ ರಾಶಿಯಿಂದ ಮಕರ ರಾಶಿಗೆ – ಪ್ರವೇಶಿಸುವ ಪುಣ್ಯಕಾಲವೇ ಮಕರ ಸಂಕ್ರಾಂತಿ, ಈ ದಿನವನ್ನು ನಾವೆಲ್ಲರೂ ಉತ್ತರಾಯಣದ ಪುಣ್ಯಕಾಲವೆಂದು ಆಚರಿಸುತ್ತೇವೆ. ಈ ದಿನದಿಂದ ಉತ್ತರಾಯಣ ಪ್ರಾರಂಭವಾಗುವುದರಿಂದ ಇದು ದೇವತೆಗಳಿಗೆ ಹಗಲು ಎಂದು ನಂಬಲಾಗುತ್ತದೆ. ಈ ಉತ್ತರಾಯಣ ಅತ್ಯಂತ ಶುಭದಾಯಕವಾದ ಕಾಲವಾಗಿದೆ ಎಲ್ಲಾ ಶುಭಕಾರ್ಯಗಳಿಗೂ ಪ್ರಶಸ್ತವಾಗಿದೆ.

ಮಕರ ಸಂಕ್ರಾಂತಿ (15-01-2024) 15-01-2024 ವಿಶೇಷತೆ
ಮಕರ ಸಂಕ್ರಾಂತಿ ಪುಣ್ಯಕಾಲ – ಬೆಳಿಗ್ಗೆ 06:55 ಇಂದ ಸಂಜೆ 06:17 ರವರೆಗೆ ಮಕರ ಸಂಕ್ರಾಂತಿ ಮಹಾಪುಣ್ಯಕಾಲ – ಬೆಳಿಗ್ಗೆ 06:55 ರಿಂದ ಬೆಳಿಗ್ಗೆ 08:44 ರವರೆಗೆ ಸೋಮವಾರದಂದು ಮಕರ ಸಂಕ್ರಾಂತಿ ಬಂದಿರುವುದರಿಂದ ಇಡೀ ದೇಶಕ್ಕೆ ಸಮೃದ್ಧಿಯನ್ನು ಸೂಚಿಸುತ್ತದೆ.

ನಮ್ಮ ದೇಶದಲ್ಲಿ ಈ ಮಕರ ಸಂಕ್ರಾಂತಿಯನ್ನು ವಿವಿಧ ಹೆಸರಿನಲ್ಲಿ ಮತ್ತು ವಿವಿಧ ಬಗೆಗಳಲ್ಲಿ ಆಚರಿಸುವುದು ವಿಶೇಷವಾಗಿದೆ. ಕರ್ನಾಟಕದಲ್ಲಿ – ಸುಗ್ಗಿ ಹಬ್ಬ, ಆಂಧ್ರಪ್ರದೇಶ ತೆಲಂಗಾಣದಲ್ಲಿ – ಭೋಗಿ. ಪೆದ್ದಪಂಡಗ, ತಮಿಳುನಾಡಿನಲ್ಲಿ ಪೊಂಗಲ್, ಹೈಪೊಂಗಲ್, ಕೇರಳದಲ್ಲಿ ಪೊಂಗಲ್ / ಮಕರವಿಳಕ್ಕು, ಅಸ್ಸಾಂನಲ್ಲಿ -ಮಾಫ್‌ಭಿಹು, ಮಧ್ಯಪ್ರದೇಶದಲ್ಲಿ – ಸುಕ್ರತ್ ಎಂದು ಕರೆಯಲಾಗುತ್ತದೆ.

ವಿವಾಹವಾಗಬೇಕಾದ ಕನ್ಯೆಯರು ಗಣಪತಿ ಆರಾಧನೆ ಮಾಡಬೇಕು.

ಸಂಕ್ರಾಂತಿಗೂ ಮುನ್ನ ಭಾರಿ ಅವಘಡಗಳು ಸಂಭವಿಸಲಿದೆ.

ರೈತರಿಗೆ ಇದು ಶುಭಗಳಿಗೆ ಉದ್ದಿನಬೇಳೆ, ಅಲಸಂದಿ, ತೊಗರಿ ಟಮೋಟ ಇತರೇ ಬೆಳೆಗಳನ್ನು ಬೆಳೆಯುವುದರಿಂದ ಲಾಭವಾಗಲಿದೆ.

ಈ ಸಂಕ್ರಾಂತಿಯಿಂದು ಮುಂದಿನ ಸಂಕ್ರಾಂತಿಯ ವರೆಗೆ ಅನಾರೋಗ್ಯ ಸಮಸ್ಯೆಗಳು ಹೆಚ್ಚಾಗಲಿದೆ.

 

 

RELATED ARTICLES

Related Articles

TRENDING ARTICLES