ಮೈಸೂರು: ಅಯೋಧ್ಯೆಯಲ್ಲಿ ಜನವರಿ 22 ರಂದು ರಾಮಮಂದಿರ ಉದ್ಘಾಟನೆ ಹಿನ್ನೆಲೆ ಮೈಸೂರು ಜನತೆಗೆ ಉಚಿತ ರೈಲು ಪ್ರಯಾಣ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅವರು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.
ಜನವರಿ 22ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯಾಗಲಿದೆ. ಉದ್ಘಾಟನೆಯಾದ ಬಳಿಕ ರಾಜ್ಯದ ಭಕ್ತರು ಅಯೋಧ್ಯೆ ಪ್ರವಾಸಕ್ಕೆ ಅನುಕೂಲ ಮಾಡಿಕೊಡಲು ಫೆಬ್ರವರಿ 4 ರಂದು ಮೈಸೂರಿನಿಂದ ಅಯೋಧ್ಯೆಗೆ ಉಚಿತ ರೈಲು ಸಂಚರಿಸಲಿದೆ. ಈ ಕುರಿತು ಸಂಸದ ಪ್ರತಾಪ್ ಸಿಂಹ ಅವರು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ: ಹೆಚ್ ಡಿ ದೇವೇಗೌಡ
ನಾನು ಮತ್ತು ಶಾಸಕ ಶ್ರೀವತ್ಸರವರ ನೇತೃತ್ವದಲ್ಲಿ ಅನೇಕರು ತೆರಳುತ್ತಿದ್ದೇವೆ. ಮೈಸೂರಿನ ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಫೆಬ್ರವರಿ 4ರಂದು ಮೈಸೂರಿನಿಂದ ಅಯೋಧ್ಯೆಗೆ ರೈಲು ಸೇವೆ ಆರಂಭ! Thank you beloved PM @narendramodi ji and RM @AshwiniVaishnaw ji. pic.twitter.com/8AzBOaoMQ5
— Pratap Simha (@mepratap) January 13, 2024