ದೊಡ್ಡಬಳ್ಳಾಪುರ ನಗರದ ಶ್ರೀ ಕ್ಷೇತ್ರ ದೊಡ್ಡಮಠದ ಆವರಣದಲ್ಲಿ ಎಡೆಯೂರು ಸಿದ್ದಲಿಂಗೇಶ್ವರ ಸ್ವಾಮಿಯವರ ಐದನೇ ವರ್ಷದ ಜಯಂತ್ಯುತ್ಸವ ಸಮಾರಂಭ ಅದ್ಧೂರಿಯಾಗಿ ನೆರವೇರಿತು.
ಬೆಳಿಗ್ಗೆ 10ಕ್ಕೆ ಆಎಂಭವಾದ ಸಿದ್ದಲಿಂಗೇಶ್ವರ ಸ್ವಾಮಿಯವರ ಮೆರವಣಿಯಲ್ಲಿ ನಂದಿಧ್ವಜ, ವೀರಗಾಸೆ, ಡೊಳ್ಳು ಕುಣಿತ, ಪೂಜಾ ಕುಣಿತ ನಾದಸ್ವರ ವಾದನಗಳೊಂದಿಗೆ ಬಸವಣ್ಣ ದೇವಾಲಯದಿಂದ ರುಮಾಲೆ ವೃತ್ತ, ಪಾಂಡುರಂಗ ದೇವಾಲಯ ಮುಂಭಾಗ, ಸ್ವಾಮಿ ವಿವೇಕಾನಂದರ ಪ್ರತಿಮೆ ಮುಂಭಾಗದಲ್ಲಿ ಸಂಚರಿಸಿ ಅಲ್ಲಿಂದ ನಗರೇಶ್ವರ ದೇವಾಲಯ, ಕಾಳಮ್ಮನ ದೇವಾಲಯ ಮಾರ್ಗವಾಗಿ ತಾಲೂಕು ಕಚೇರಿ ವೃತ್ತದ ಮೂಲಕ ಸಾಗುವ ಮೂಲಕ ದೊಡ್ಡಮಠದ ಆವರಣದಲ್ಲಿ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.
ಈ ಕಾರ್ಯಕ್ರಮದಲ್ಲಿ ಬೆಂಗಳೂರಿನ ಬೇಲಿ ಮಠದ ಚರಮೂರ್ತಿ ಶಿವರುದ್ರ ಮಹಾಸ್ವಾಮಿಗಳು ಬಾಲಚಂದ್ರ ರವರು ಸಂಗ್ರಹಿಸಿದ ” ಮಹಾಶಿವಯೋಗಿ ಉದ್ದಾನ ಯತೀಶ್ವರರು” ಎಂಬ ಕೃತಿಯನ್ನು ಲೋಕಾರ್ಪಣೆ ಮಾಡಲಾಯಿತು.
ಇದನ್ನೂ ಓದಿ: ಬಾಂಗ್ಲಾದೇಶ ಸಾರ್ವತ್ರಿಕ ಚುನಾವಣೆಯಲ್ಲಿ ಕ್ರಿಕೇಟಿಗ ಶಕೀಬ್ಗೆ ಭರ್ಜರಿ ಗೆಲುವು!
ವೇದಿಕೆಯಲ್ಲಿ ನೆಲಮಂಗಲ ತಾಲ್ಲೂಕಿನ ವೀರಶೈವ ಲಿಂಗಾಯತ ನಿವೃತ್ತ ನೌಕರರ ಸಂಘದ ವತಿಯಿಂದ ಇಂಜಿನಿಯರಿಂಗ್ ಶಿಕ್ಷಣ ಮುಂದುವರಿಸಲು ಸಹಾಯಾರ್ಥವಾಗಿ ಹತ್ತು ಸಾವಿರ ರೂಪಾಯಿಗಳ ನೆರವು ನೀಡಿದರು. ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣೆ ಮಾಡಿದರು.
ಈ ವೇಳೆ ತಾಲೂಕಿನ ಶಾಸಕರಾದ ಧೀರಜ್ ಮುನಿರಾಜು, ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ರವಿಕುಮಾರ್, ಪುಷ್ಪಾ ಶಿವಶಂಕರ, ಮುತ್ತಣ್ಣ, ನೆಲಮಂಗಲ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಲ್ಲಣ್ಣ ಮುಂತಾದ ಹಲವಾರು ಗಣ್ಯರು ಉಪಸ್ಥಿತರಿದ್ದರು.