Thursday, December 19, 2024

ನಟ ಯಶ್ ಜನ್ಮದಿನಕ್ಕೆ ಕಟೌಟ್​​​ ಕಟ್ಟುವಾಗ ದುರಂತ: ಮೂವರು ಸ್ಥಳದಲ್ಲೇ ಸಾವು!

ಗದಗ: ಚಿತ್ರ ನಟ ಯಶ್​ ಜನ್ಮದಿನದ ಹಿನ್ನಲೆ ಅವರ ಬ್ಯಾನರ್​ ಕಟ್ಟುವಾಗ ಮೂವರು ಅಭಿಮಾನಿಗಳು ದಾರುಣ ಸಾವಿಗೀಡಾಗಿರುವ ಘಟನೆ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೊರಣಗಿ ಗ್ರಾಮದಲ್ಲಿ ನಡೆದಿದೆ.

ಹನಮಂತ ಹರಿಜನ, ಮುರಳಿ ನಡವಿನಮನಿ, ನವೀನ್ ಗಾಜಿ ಮೃತ ಯುವಕರು. ಮಂಜುನಾಥ್ ಹರಿಜನ, ದೀಪಕ ಹರಿಜನ, ಪ್ರಕಾಶ ಮ್ಯಾಗೇರಿ ಎಂಬವರಿಗೆ ಗಂಭೀರ ಗಾಯಗಳಾಗಿವೆ. ಎಲ್ಲರೂ ಸೂರಣಗಿ ಗ್ರಾಮದವರು.

ಇದನ್ನೂ ಓದಿ: ರಾಜ್ಯದಲ್ಲಿ ಬಹುತೇಕ ಕಡೆ ಮಳೆ ಸಾಧ್ಯತೆ!

ಯಶ್‌ ಅವರ ಜನ್ಮದಿನಕ್ಕೆ ಶುಭಾಶಯ ಕೋರುವ ಬ್ಯಾನರ್‌ ಅನ್ನು ಹಸಿ ನೀಲಗಿರಿ ಕಟ್ಟಿಗೆಗೆ ಕಟ್ಟಿ ಮೇಲೆತ್ತುವಾಗ ವಿದ್ಯುತ್ ತಂತಿ ತಗುಲಿ ಕರೆಂಟ್‌ ಶಾಕ್‌ ಹೊಡೆದು ಅವಘಡ ಸಂಭವಿಸಿದೆ. ಈ ಅವಘಡ ಯುವಕರ ಸಾವಿಗೆ ಕಾರಣವಾಗಿದೆ. ಘಟನೆ ಸಂಬಂಧ ಲಕ್ಷ್ಮೇಶ್ವರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

2018ರಲ್ಲೂ ಗದಗ ಮಾದರಿಯ ದುರಂತ :

ನಟ ಯಶ್ ಜನ್ಮದಿನದಂದು ಈ ಹಿಂದೆಯೂ ಅವಘಡಗಳು ಸಂಭವಿಸಿದ್ದವು, 2018ರಲ್ಲಿ ಫೆಬ್ರವರಿ ಮೊದಲ ವಾರದಲ್ಲಿ ಹಾವೇರಿಯಲ್ಲಿ ನಡೆದ ಊರಹಬ್ಬಕ್ಕೆ ಯಶ್ ಬ್ಯಾನರ್ ಕಟ್ಟಲು ಹೋಗಿ ವಿದ್ಯುತ್ ಸ್ಪರ್ಶಿಸಿ ಹಾವೇರಿಯ ಅಗಡಿ ಮೂಲದ ಹರೀಶ್ ಎರಡೂ ಕೈ ಕಳೆದುಕೊಂಡಿದ್ದರು. ಹರೀಶ್​ ಗೆ ಆದ ದುರಂತ ವಿಚಾರ ತಿಳಿದು ನಟ ಯಶ್​, ಆತನ ಸಂಪೂರ್ಣ ಚಿಕಿತ್ಸಾ ವೆಚ್ಚ ಭರಿಸಿದ್ದರು.

2019, ಜನವರಿ 8 ರಂದು ಆತ್ಮಹತ್ಯೆಗೆ ಯತ್ನ,

ಇನ್ನೂ ಮತ್ತೊಂದು ಪ್ರಕರಣದಲ್ಲಿ 2019ರಲ್ಲಿ ನೆಲಮಂಗಲ ತಾಲೂಕಿನ ಶಾಂತಿನಗರ ಮೂಲದ ರವಿ ಎಂಬಾತ ಹೊಸಕೆರೆ ಹಳ್ಳಿಯ ನಿವಾಸದ ಬಳಿ ನಟ ಯಶ್​ ನನ್ನು ನೋಡಲು ಬಿಡುತ್ತಿಲ್ಲ ಎಂದು ಹೇಳಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಕೂಡಲೇ ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜನವರಿ 9ರಂದೇ ಈತ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದ.

RELATED ARTICLES

Related Articles

TRENDING ARTICLES