ದೊಡ್ಡಬಳ್ಳಾಪುರ : ಜೀವನೋಪಾಯಕ್ಕಾಗಿ ಬೀದರ್ನಿಂದ ವಲಸೇ ಬಂದ ವಿಕಲಚೇತನ ಯುವಕನಿಗೆ ಉಚಿತವಾಗಿ ತ್ರಿಚಕ್ರ ವಾಹನವನ್ನು ವಿತರಣೆ ಮಾಡಲಾಗಿದೆ.
ಕಡು ಬಡತನದಲ್ಲಿ ವಿಕಲಚೇತನನಾಗಿ ಹುಟ್ಟಿ ಜೀವನ ಸಾಗಿಸಲು ಕಷ್ಟ ಪಡಿತ್ತಿದ್ದ ಶಂಭುಲಿಂಗ (ಸುನೀಲ್) ಕುಟುಂಬವು ಜೀವನೋಪಾಯಕ್ಕಾಗಿ ಬೀದರ್ ಜಿಲ್ಲೆಯಿಂದ ಬೆಂಗಳೂರು ಗ್ರಾಮಾಂತ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಹೊಸಹುಡ್ಯ ಗ್ರಾಮದಲ್ಲಿ ನೆಲೆಸಿದ್ದರು.
ಸುನೀಲ್ ವಿಕಲಚೇತನನಾದ ಕಾರಣ ಯಾವುದೇ ಉದ್ಯೋಗ ಸಿಗದೇ ಕೊನೆಗೆ ತಳ್ಳುವ ಗಾಲಿ ಚಕ್ರದ ಗಾಡಿಯಲ್ಲಿ ನೀರಿನ ಬಾಟಲ್ ಮಾರಾಟ ಮಾಡಿ ಬಂದ ಹಣದಲ್ಲಿ ಆ ದಿನದ ಊಟಕ್ಕೆ ಸಂಪಾದಿಸಿಳ್ಳುತ್ತಿದ್ದಾರೆ. ಇವರ ಈ ಸಾಧನೆ ಸದೃಢ ದೇಹ ಹೊಂದಿದದ್ದರು ಜನರು ಭಿಕ್ಷೆ ಬೇಡಿ ತಿನ್ನುವವವರಿಗೆ, ಸುಮ್ಮನೇ ಕಾಲಕಳೆಯುವ ಸೋಂಬೇರಿಗಳಿಗೂ ಮಾದರಿಯಾಗಿದ್ದಾರೆ.
ಇದನ್ನೂ ಓದಿ: ಚಿನ್ನದ ಕತ್ತಿ ಶ್ರೀರಾಮನಿಗೆ ಅರ್ಪಣೆ : ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ
ಇವರ ಸ್ವಾಭಿಮಾನ ಜೀವನ ಕಂಡ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಕಲಚೇತನರು ಹಾಗು ಹಿರಿಯ ನಾಗರೀಕರ ಸಬಲೀಕರ ಇಲಾಖೆಯ ಅಧಿಕಾರಿಗಳಾದ ಎನ್.ಎಂ ಜಗದೀಶ್ ಅವರು, ಸುನೀಲ್ ಜೀವನಕ್ಕೆ ಅನುಕೂಲವಾಗಲೆಂದು ತಮ್ಮ ಇಲಾಖೆ ವತಿಯಿಂದ ಸುನೀಲ್ನ ಬೀದರ್ ವಿಳಾಸವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಬದಲಾಯಿಸುವಂತೆ ಅಧಿಕಾರಿಗಳಿಗೆ ಸೂಚಿಸಿ ಬಳಿಕ ಉಚಿತವಾಗಿ ತ್ರಿಚಕ್ರವಾಹನವನ್ನು ವಿತರಣೆ ಮಾಡಿದ್ದಾರೆ. ಅಧಿಕಾರಿಗಳ ಈ ಸೇವೆಗೆ ಬಡ ಕುಟುಂಬ ಸಂತಸ ವ್ಯಕ್ತಪಡಿಸಿದ್ದು ಸಾರ್ವಜನಿಕರು ಮೆಚ್ಚಿಗೆ ಸೂಚಿಸಿದ್ದಾರೆ.