Monday, November 25, 2024

90 ಕೋಟಿ ವೆಚ್ಚದಲ್ಲಿ ರಾಮಮಂದಿರಕ್ಕೆ 24×7 ಭದ್ರತಾ ವ್ಯವಸ್ಥೆ

ಅಯೋಧ್ಯೆ : ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ರಾಮಮಂದಿರ ಉದ್ಘಾಟನೆಗೆ ಕೆಲವೇ ದಿನಗಳು ಬಾಕಿ ಇದೆ. ಈ  ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ದೇಶದ ಅಸಂಖ್ಯಾತ ಹಿಂದೂಗಳು ಕಾತರರಾಗಿದ್ದಾರೆ.

ಭಾರತದ ಹಿರಿಮೆ ಮತ್ತು ಭವ್ಯ ಸಂಕೇತವಾಗಿರುವ ರಾಮಮಂದಿರ ರಕ್ಷಣೆಗಾಗಿ ಭಾರಿ ಭದ್ರತಾ ವ್ಯವಸ್ಥೆಯನ್ನೇ ಕೈಗೊಳ್ಳಲಾಗುತ್ತಿದೆ. 24*7 ಹೈಟೆಕ್​ ಭದ್ರತಾ ವ್ಯವಸ್ಥೆ ಅಳವಡಿಸುತ್ತಿರುವುದಾಗಿ ಉತ್ತರ ಪ್ರದೇಶದ ಕಾನೂನು ಮತ್ತು ಸುವ್ಯವಸ್ಥೆಯ ಪೊಲೀಸ್​ ಮಹಾನಿರ್ದೇಶಕರಾದ ಪ್ರಶಾಂತ್​ ಕುಮಾರ್​ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಬರೋಬ್ಬರಿ 90 ಕೋಟಿ ರೂಪಾಯಿ ವೆಚ್ಚದಲ್ಲಿ ಫೂಲ್‌ಪ್ರೂಫ್ ಭದ್ರತಾ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಇದು ದಿನದ 24 ಗಂಟೆಯು ಕೆಲಸ ನಿರ್ವಹಿಸಲಿದೆ. ಈ ಫೂಲ್‌ಪ್ರೂಫ್ ಸೆಕ್ಯುರಿಟಿ ಸಿಸ್ಟಮ್​ ಎಂದಿಗೂ ಫೇಲ್​ ಆಗುವುದಿಲ್ಲ. ದೇವಾಲಯದ ಮೇಲಿನ ದಾಳಿ ಮತ್ತು ಒಳನುಗ್ಗುವಿಕೆಯನ್ನು ತಡೆಯಲು ಈ ಸಿಸ್ಟಮ್​ ಅಳವಡಿಸಲಾಗುತ್ತಿದೆ. ಭದ್ರತಾ ಸಾಧನಗಳನ್ನು ಅಳವಡಿಸುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಪ್ರಶಾಂತ್​ ಕುಮಾರ್ ತಿಳಿಸಿದ್ದಾರೆ.

ಪ್ರಧಾನಿ ಮೋದಿ ಉಪವಾಸ ವ್ರತ

ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಅದ್ಧೂರಿಯಾಗಿ ನೆರವೇರಲಿದೆ. ಅಂದೇ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಜೊತೆಗೆ ವಿಶೇಷ ಹೋಮ-ಹವನ ಜರುಗಲಿದೆ. ವಿಶೇಷವೆಂದರೆ, ಉದ್ಘಾಟನೆ ದಿನ ಪ್ರಧಾನಿ ನರೇಂದ್ರ ಮೋದಿಯವರು ಉಪವಾಸ ವ್ರತ ಕೈಗೊಳ್ಳಲಿದ್ದಾರೆ. ಅದೊಂದು ದಿನ ಏನೂ ತಿನ್ನುವುದು ಬೇಡ ಎಂದು ಮೋದಿ ನಿರ್ಧರಿಸಿದ್ದಾರೆ.

RELATED ARTICLES

Related Articles

TRENDING ARTICLES