ಮಧ್ಯಪ್ರದೇಶ : ನೋಡ್ರಿ ವಿಧಿ ಅನ್ನೋದು ಎಷ್ಟು ಕ್ರೂರಿ. ಆತ ಸ್ನೇಹಿತರ ಜೊತೆ ಖುಷಿಯಿಂದಲೇ ಕ್ರಿಕೆಟ್ ಆಡುತ್ತಿದ್ದ. ಈ ವೇಳೆ ದಿಢೀರನೆ ನೆಲಕ್ಕೆ ಕುಸಿದು ಬಿದ್ದವ ಮತ್ತೆ ಮೇಲೆ ಏಳಲೇ ಇಲ್ಲ.
ಹೌದು, ಕ್ರಿಕೆಟ್ ಆಡುವಾಗ ಯುವಕನೊಬ್ಬ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯಲ್ಲಿ ನಡೆದಿದೆ.
ಇಂದಾಲ್ ಸಿಂಗ್ ಜಾದವ್ (22) ಮೃತಪಟ್ಟ ಯುವಕ ಎಂದು ತಿಳಿದುಬಂದಿದೆ. ಬಾಲವಾಡ್ ವ್ಯಾಪ್ತಿಯ ಕಾಟ್ಕೂಟ್ನಲ್ಲಿ ಕ್ರಿಕೆಟ್ ಟೂರ್ನಿಮೆಂಟ್ ಆಡುವ ವೇಳೆ ಇಂದಾಲ್ ಬೌಲಿಂಗ್ ಮಾಡುತ್ತಿದ್ದ. ಈ ವೇಳೆ ದಿಢೀರನೆ ಕುಸಿದು ಬಿದ್ದಿದ್ದಾನೆ.
ಕೂಡಲೇ ಸ್ನೇಹಿತರು ಇಂದಾಲ್ನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಆತ ಕೊನೆಯುಸಿರೆಳೆದಿದ್ದಾನೆ. ತೀವ್ರ ಹೃದಯಾಘಾತದಿಂದ ಇಂದಾಲ್ ಮೃತಪಟ್ಟಿದ್ದಾನೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.