Tuesday, December 3, 2024

ನಾಳೆ ಎಕ್ಸ್‌ಪೋ ಸ್ಯಾಟ್‌ ಉಪಗ್ರಹ ಉಡಾವಣೆ: ಇಸ್ರೋ ವಿಜ್ಞಾನಿಗಳಿಂದ ತಿರುಪತಿ ತಿಮ್ಮಪ್ಪನ ದರ್ಶನ!

ಬೆಂಗಳೂರು: ಭಾರತದ ಪ್ರತಿಷ್ಟಿತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ISRO ಜ.1 ರಂದು ಎಕ್ಸ್​-ರೇ ಪೊಲಾರಿಮೀಟರ್​​ ಉಪಗ್ರಹ ಉಡಾವಣೆಗೆ ಸಜ್ಜಾಗಿದೆ ಈ ಹಿನ್ನೆಲೆ ಇಂದು ಇಸ್ರೋ ವಿಜ್ಞಾನಿಗಳು ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ.

ಚಂದ್ರಯಾನ-3, ಸೂರ್ಯಯಾನ ಮೂಲಕ ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಹೆಗ್ಗುರುತು ಮೂಡಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, 2024 ರಲ್ಲೂ ಅದೇ ಹಾದಿಯಲ್ಲಿ ಮುಂದುವರಿಯಲು ಸಜ್ಜಾಗಿದೆ.

ಇದನ್ನೂ ಓದಿ: ಆಹ್ವಾನವಿಲ್ಲದ ಮದುವೆ ಕಾರ್ಯಕ್ರಮಗಳಿಗೆ ಹೋದರೆ ಜೈಲೂಟ ಗ್ಯಾರಂಟಿ!

ಹೊಸ ವರ್ಷದ ಮೊದಲ ದಿನ PSLV-C58 ಎಕ್ಸ್-ರೇ ಪೋಲಾರಿಮೀಟರ್ ಉಪಗ್ರಹ ಉಡಾವಣೆಗೆ ಸಜ್ಜಾಗಿದೆ. ನಾಳೆ ಬೆಳಗ್ಗೆ 9:10 ಕ್ಕೆ ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಎಕ್ಸ್‌ಪೋಸ್ಯಾಟ್‌ ಉಪಗ್ರಹ ಉಡಾವಣೆ ಆಗಲಿದೆ. ಇಸ್ರೋ ಮಿಷನ್‌ ಯಶಸ್ಸಿಗಾಗಿ ಇಸ್ರೋ ವಿಜ್ಞಾನಿಗಳಾದ ಅಮಿತ್ ಕುಮಾರ್ ಪಾತ್ರ, ವಿಕ್ಟರ್ ಜೋಸೆಫ್, ಯಶೋದಾ ಮತ್ತು ಶ್ರೀನಿವಾಸ್ ಅವರು ತಿರುಮಲ ಶ್ರೀ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ.

RELATED ARTICLES

Related Articles

TRENDING ARTICLES