Saturday, November 23, 2024

Google Doodle New year: 2023ರ ವಿದಾಯಕ್ಕೆ ಗೂಗಲ್‌ ಡ್ಯೂಡಲ್‌ ನೋಟ ಹೇಗಿದೆ ಗೊತ್ತಾ?

ಬೆಂಗಳೂರು: 2023ರಕ್ಕೆ ವಿದಾಯ ಹೇಳುವ ದಿನ ಬಂದೇ ಬಿಟ್ಟಿತ್ತು.ಒಂದು ಕಡೆ ಹೊಸ ವರ್ಷ 2024 ಬರ ಮಾಡಿಕೊಳ್ಳುವ ಸಂತಸದ ಸಮಯವನ್ನ ಗೂಗಲ್‌ ಡ್ಯೂಡಲ್‌ ವಿಭಿನ್ನವಾಗಿ ರೂಪಿಸಿದೆ.

ಎರಡೂ ಒಟ್ಟೊಟ್ಟಿಗೆ ಪ್ರತಿ ವರ್ಷ ಬಂದೇ ಬರುತ್ತವೆ. ಎರಡನ್ನೂ ವಿಭಿನ್ನವಾಗಿ ನೋಡುವ ಪ್ರಯತ್ನ ಪ್ರತಿಯೊಬ್ಬರು ಮಾಡುತ್ತಾರೆ. ಅಂದರೆ ಹಳೆಯ ವರ್ಷದ ನೆನಪುಗಳನ್ನು ಮೆಲುಕು ಹಾಕುತ್ತಲೇ ಹೊಸ ವರ್ಷದ ಮೆಟ್ಟಿಲುಗಳನ್ನು ಏರುವ ಸಮಯ. ಇದನ್ನು ಗೂಗಲ್‌ ಕೂಡ ಭಿನ್ನವಾಗಿ ನೋಡಿದೆ.

ನೀವು ಗೂಗಲ್‌ ಪೇಜ್‌ಗೆ ಹೋದರೆ ಗೂಗಲ್‌ ಡ್ಯೂಡಲ್‌ ಕಾಣುತ್ತದೆ. ಇದರಲ್ಲಿ ಹಳೆಯ ವರ್ಷದ ನೆನಪುಗಳನ್ನು ಮಾಡಿಕೊಳ್ಳುವ, ಹೊಸ ವರ್ಷವನ್ನು ಸಡಗರದಿಂದ ಬರ ಮಾಡಿಕೊಳ್ಳುವ ಸಂದೇಶಗಳಿವೆ. ಗೂಗಲ್‌ ಡ್ಯೂಡಲ್‌ನಲ್ಲಿ 2023ರ ವರ್ಷವನ್ನು ಬೀಳ್ಕೊಡುವ ಬೇಸರದ ಮೀಮ್ಸ್‌ಗಳಿವೆ. ಬೇಸರದ ಮುಖಭಾವದೊಂದಿಗೆ ಮೀಮ್ಸ್‌ಗಳು ಹಾದು ಹೋಗುವ 2023ರ ಡ್ಯೂಡಲ್‌ ಇದೆ.

ಇದನ್ನೂ ಓದಿ: 2024 ರಲ್ಲಿ ಸರ್ಕಾರಿ ಮತ್ತು ಬ್ಯಾಂಕ್, ಇತರೇ ನೌಕರರಿಗೆ ಸಾಲುಸಾಲು ರಜೆಗಳು: ಸಂಪೂರ್ಣ ವಿವರ ಇಲ್ಲಿದೆ!

ಇದೇ ರೀತಿ ಹೊಸ ವರ್ಷವನ್ನು ಸ್ವಾಗತಿಸಿಲು 3… 2… 1 ಎನ್ನುವ ಕ್ಷಣಗಣನೆಯನ್ನೂ ನೀಡಲಾಗಿದೆ. ಹೊಸ ವರ್ಷಕ್ಕೆ ಬೆಳಕಿನ ಚಿತ್ತಾರದ ಕ್ಷಣಗಳನ್ನು ಮೂಡಿಸಲಾಗಿದೆ. ಇನ್ನೇನು ಹೊಸ ವರ್ಷ ಬಂದೇ ಬಿಟ್ಟಿತು ಎಂದು ನೆನಪಿಸುವ ಪ್ರಯತ್ನವನ್ನು ಗೂಗಲ್‌ ಮಾಡಿದೆ.

ಕೊನೆಯ ಕ್ಷಣಗಳನ್ನು ದಾಟಿಕೊಂಡು ಹೊಸ ವರ್ಷವನ್ನು ಬರ ಮಾಡಿಕೊಳ್ಳುವ ಖುಷಿ ನಮ್ಮಲ್ಲಿ ಇರಲಿ. ಜಗತ್ತಿನ ಎಲ್ಲೆಡೆ ಈಗ ಹೊಸ ವರ್ಷವನ್ನು ಸಂತಸದಿಂದಲೇ ಬರ ಮಾಡಿಕೊಳ್ಳುವ ಕ್ಷಣ ಎದುರಾಗುತ್ತಿದೆ. ನಮ್ಮ ಹೊಸ ಸಂಕಲ್ಪಗಳು, ಶುಭಾಶಗಳೊಂದಿಗೆ ಮುಂದುವರಿಯೋಣ, ಪ್ರೀತಿ, ಸಂತಸ, ಯಶಸ್ಸು ಎಲ್ಲವೂ ಸಿಗುವಂತಾಗಲಿ ಎಂದು ಗೂಗಲ್‌ ಶುಭಾಶಯಗಳನ್ನು ಕೋರಿದೆ.

ಹಳೆಯದನ್ನು ಮರೆಯದೇ ಹೊಸದರಲ್ಲಿ ಮೈ ಮರೆಯದೇ ನಾವು ಮುನ್ನಡೆಯೋಣ ಎನ್ನುವ ಸಂದೇಶವನ್ನು ಗೂಗಲ್‌ ಸಾರಿದೆ.

 

RELATED ARTICLES

Related Articles

TRENDING ARTICLES