Monday, December 23, 2024

ಕಾಂಗ್ರೆಸ್-ಜೆಡಿಎಸ್ ಜಟಾಪಟಿ : ರಸ್ತೆಗೆ ಹಾಲು ಸುರಿದು ಗ್ರಾಮಸ್ಥರು ಪ್ರತಿಭಟನೆ

ರಾಮನಗರ: ಹಾಲಿನ ಡೈರಿ ವಿಚಾರಕ್ಕೆ ಕಾಂಗ್ರೆಸ್-ಜೆಡಿಎಸ್ ನಡುವೆ ಜಟಾಪಟಿ ನಡೆದಿದೆ.
ರಸ್ತೆಗೆ ಹಾಲು ಸುರಿದು ಗ್ರಾಮಸ್ಥರಿಂದ ಪ್ರತಿಭಟನೆ ಮಾಡಿರುವ ಘಟನೆ ರಾಮನಗರ ತಾಲೂಕಿನ ಅಣ್ಣಹಳ್ಳಿ ಗ್ರಾಮದಲ್ಲಿ ನಡೆದಿದೆ.

ಹಾಲಿನ ಡೈರಿ ಕಾರ್ಯದರ್ಶಿ ನೇಮಕ ವಿಚಾರದಲ್ಲಿ ಜೆಡಿಎಸ್- ಕಾಂಗ್ರೆಸ್ ನಡುವೆ ಗಲಾಟೆಯಾಗಿದೆ.
ಅಧಿಕಾರಿ ದುರುಪಯೋಗ ಪಡಿಸಿಕೊಂಡು ಕಾಂಗ್ರೆಸ್ ಕಾರ್ಯದರ್ಶಿ ನೇಮಕ ಮಾಡಿದೆ ಎಂದು ಜೆಡಿಎಸ್ ಆಕ್ರೋಶ ಮಾಡಿದ್ಧಾರೆ. ಎರಡು ಬಣದ ನಡುವಿನ ಗುದ್ದಾಟಕ್ಕೆ ರಸ್ತೆಗೆ ಹಾಲು ಸುರಿದು ಆಕ್ರೋಶ ಮಾಡಿದ್ದಾರೆ.

ಜೆಡಿಎಸ್ ಬೆಂಬಲಿಗರು ಡೈರಿಗೆ ಹಾಲು ಹಾಕದೇ ರಸ್ತೆಗೆ ಸುರಿದಿದ್ಧಾರೆ.ಕಾರ್ಯದರ್ಶಿಯನ್ನು ಬದಲಾವಣೆ ಮಾಡಲೇ ಬೇಕು ಎಂದು ರಾತ್ರಿ ಹಾಗೂ ಬೆಳಿಗ್ಗೆ ರಸ್ತೆಗೆ ಹಾಲು ಸುರಿದು ಪಟ್ಟು ಹಿಡಿದಿದ್ಧಾರೆ.
ಸ್ಥಳಕ್ಕೆ ರಾಮನಗರ ಗ್ರಾಮಾಂತರ ಪೋಲಿಸರ ಭೇಟಿ, ಪರಿಶೀಲನೆ. ಎರಡೂ ಬಣಗಳ ಮನವೊಲಿಸಲು ಪೊಲೀಸರು ಮುಂದಾಗಿದ್ದಾರೆ.

RELATED ARTICLES

Related Articles

TRENDING ARTICLES