Tuesday, December 3, 2024

ಟ್ರಿಪ್ ಗೆ ಹೋಗಿದ್ದ ವೇಳೆ ವಿದ್ಯಾರ್ಥಿಗೆ ಕಿಸ್ ಕೊಟ್ಟ ಶಿಕ್ಷಕಿ : ಫೋಟೋ ವೈರಲ್

ಚಿಕ್ಕಬಳ್ಳಾಪುರ: ಇತ್ತೀಚೆಗೆ ಶಾಲೆಯಿಂದ ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದ ವೇಳೆ ಶಾಲಾ ಬಾಲಕನೊಂದಿಗೆ ಮುಖ್ಯ ಶಿಕ್ಷಕಿ ಈ ರೀತಿ ವರ್ತಿಸಿದ್ದು, ಇದೀಗ ಆ ಪೋಟೋಗಳು ಸೋರಿಕೆ ಆಗಿ ವಿದ್ಯಾರ್ಥಿ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.

ಶೈಕ್ಷಣಿಕ ಅಧ್ಯಯನ ಪ್ರವಾಸಕ್ಕೆ ತೆರಳಿದ್ದ ವೇಳೆ ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿಯೊಬ್ಬರು ತನ್ನ ಮಗ ವಯಸ್ಸಿನ ಅಪ್ರಾಪ್ತ ಬಾಲಕನೊಂದಿಗೆ ವರ್ತಿಸಿರುವುದಲ್ಲದೇ ಅಸಭ್ಯವಾಗಿ ಆತನೊಂದಿಗೆ ರೊಮ್ಯಾಟಿಕ್ ಆಗಿ ವರ್ತಿಸಿ ವಿಡಿಯೋ ಹಾಗೂ ಚಿತ್ರಗಳನ್ನು ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದಿರುವ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮುರಗಮಲ್ಲ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದಿದೆ.

ಶಾಲೆಯ ಮುಖ್ಯ ಶಿಕ್ಷಕಿ ಪುಷ್ಪಲತಾ ಎಂಬಾಕೆ ಈ ರೀತಿ ತಾನೊಬ್ಬ ಗುರು ಎಂಬುದನ್ನು ಮರೆತು ಶಾಲೆಯ ವಿದ್ಯಾರ್ಥಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾಳೆ. ಈ ವೇಳೆ ಬಾಲಕನೊಂದಿಗೆ ವಿವಿಧ ಭಂಗಿಗಳಲ್ಲಿ ಪೋಟೋ ತೆಗೆಸಿಕೊಂಡಿರುವ ಶಿಕ್ಷಕಿ, ವಿದ್ಯಾರ್ಥಿ ಕೂಡ ಶಿಕ್ಷಕಿಯರನ್ನು ಮುದ್ದಾಡಿದ್ದು, ಶಿಕ್ಷಕಿ ಕೂಡ ಬಾಲಕನಿಗೆ ಕಿಸ್ ಕೊಟ್ಟಿರುವ ಪೋಟೋಗಳು ಈಗ ಎಲೆಡೆ ವೈರಲ್ ಆಗಿದೆ.

ಶಿಕ್ಷಕಿಯ ವರ್ತನೆ ಬಗ್ಗೆ ಪೋಷಕರು ಕಿಡಿಕಾರಿದ್ದಾರೆ. ಅಲ್ಲದೇ ಬುಧವಾರ ಬೆಳಗ್ಗೆ ಈ ವಿಷಯ ತಿಳಿಯುತ್ತಿದ್ದಂತೆ ವಿದ್ಯಾರ್ಥಿ ಪೋಷಕರು ಕೂಡ ಶಾಲೆ ಬಳಿ ತೆರಳಿ ಶಿಕ್ಷಕಿ ವಿರುದ್ಧ ಆಕ್ರೋಶಕ್ಕೆ ವ್ಯಕ್ತಪಡಿಸಿದ್ದಾರೆ. ಇನ್ನೂ ಘಟನೆಯ ಬಗ್ಗೆ ಶಾಲೆ ಪೋಷಕರು ಕ್ಷೇತ್ರ ಶಿಕ್ಷಣಾಧಿಕಾರಿ ಗಮನಕ್ಕೆ ತಂದಿದ್ದಾರೆ.

 

RELATED ARTICLES

Related Articles

TRENDING ARTICLES