ಅಂಜನಾದ್ರಿ (ಕೊಪ್ಪಳ ಜಿಲ್ಲೆ): ಹನುಮಮಾಲೆ ವಿಸರ್ಜನೆ ಅಂಗವಾಗಿ ಶನಿವಾರ ಮಧ್ಯರಾತ್ರಿಯೇ ಹನುವನಿಗೆ ತರಹೇವಾರಿ ಬಣ್ಣಗಳ ಹೂಗಳಿಂದ ಮೂರ್ತಿಯನ್ನು ಅಲಂಕಾರ ಮಾಡಲಾಗಿತ್ತು.
ನಾಡಿನ ವಿವಿದೆಡೆ ಹನುಮಮಾಲಾ ಧಾರಿಗಳಿಂದ ಮಾಲೆ ವಿಸರ್ಜನೆ ಮಾಡಲು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. 575 ಮೆಟ್ಟಿಲುಗಳನ್ನು ಹತ್ತಿ ಬಂದು ಮಾಲೆ ವಿಸರ್ಜನೆ ಮಾಡುತ್ತಿರುವ ಹನುಮ ಭಕ್ತರು
ಹನುಮಮಾಲಾ ವಿಸರ್ಜನೆ ಹಿನ್ನಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.
ಇದನ್ನೂ ಓದಿ: ಕೆಜೆಪಿ ಪಾರ್ಟಿ 2 ಇದ್ದಂತೆ : ಕಳ್ಳರು, ಲಫಂಗರು ಹೆಚ್ಚು ಸೇರ್ತಿದ್ದಾರೆ: ಯತ್ನಾಳ್
ಇನ್ನೂ ಶನಿವಾರವೂ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರಿಂದ ಅವರ ಸಂಖ್ಯೆ ಭಾನುವಾರ ಕೂಡ ಹೆಚ್ಚುತ್ತಲೇ ಹೋಯಿತು. ಹೊತ್ತು ಏರುತ್ತಿದ್ದಂತೆಯೇ ಸಾಲುಸಾಲಾಗಿ ಬರುತ್ತಿರುವ ಭಕ್ತರನ್ನು ನಿಯಂತ್ರಿಸಲು ಹಾಗೂ ಸರತಿ ಸಾಲಿನಲ್ಲಿ ಕಳಿಸಲು ಪೊಲೀಸರು ಎರಡು ದಿನಗಳಿಂದ ಸರತಿ ಮೇಲೆ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದ್ದಂತೆಯೇ ಇಲ್ಲಿಗೆ ಬರುವ ಭಕ್ತರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಹೊರರಾಜ್ಯ ಮತ್ತು ಹೊರಜಿಲ್ಲೆಗಳಿಂದಲೂ ಅಪಾರ ಸಂಖ್ಯೆಯಲ್ಲಿ ಭಕ್ತರು ಅಂಜನಾದ್ರಿಗೆ ಬರುತ್ತಿದ್ದಾರೆ. ಅವರಿಗೆ ಮಾಹಿತಿ ನೀಡಲು ಸಹಾಯವಾಣಿ ಆರಂಭಿಸಲಾಗಿದೆ. ಹೊ