ಶಿವಮೊಗ್ಗ : ರಾಜ್ಯದಲ್ಲಿ ಹಿಜಾಬ್ ರಾಜಕಾರಣ ಮಾಡಲು ಯತ್ನಿಸಿ ಮುಸಲ್ಮಾನರನ್ನು ಓಲೈಸಬೇಕು ಎಂದು ಯತ್ನಿಸಿದ್ದ ಸಿದ್ದರಾಮಯ್ಯ ಅವರ ಯತ್ನ. ಇದರ ವಿರುದ್ಧ ಬಿಜೆಪಿಯ ವಿರೋಧ, ಹಿಂದುತ್ವದ ಶಕ್ತಿ ಗಮನಿಸಿ ಸಿಎಂ ಉಲ್ಟಾ ಹೊಡೆದಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸಿದ್ದರಾಮಯ್ಯ ನಾನು ಹಾಗೆ ಹೇಳಿಲ್ಲ. ಪರಿಶೀಲನೆ ಮನನ ಮಾಡುತ್ತೇವೆ ಎಂದು ಹೇಳಿದ್ದಾರೆ. ರಾಜ್ಯದ ಮೂಲೆ ಮೂಲೆಗಳಿಂದ ಹಿಂದುಗಳಿಂದ ವ್ಯಕ್ತವಾದ ವಿರೋಧ ಗಮನಿಸಿ ಹೀಗೆ ಹೇಳಿದ್ದಾರೆ ಎಂದು ಕುಟುಕಿದ್ದಾರೆ.
ಕಾನೂನು ಸಚಿವರು ಸಿಎಂ ಸಿದ್ದರಾಮಯ್ಯ ಹೇಳಿದ್ದರಲ್ಲಿ ತಪ್ಪೇನಿದೆ? ಎಂದು ಹೇಳಿದ್ದಾರೆ. ಕಾನೂನು ಸಚಿವರು ಹೀಗೆ ಹೇಳುವುದು ಸರಿಯಲ್ಲ. ಚರ್ಚೆಯೇ ಮಾಡದೆ ಈ ರೀತಿಯಲ್ಲಿ ನಡೆದುಕೊಳ್ಳುವುದು ಸರಿಯಲ್ಲ. ಅದಕ್ಕೆ ನಾನು ಸಿದ್ದರಾಮಯ್ಯ ಅವರದ್ದು ತೊಘಲಕ್ ದರ್ಬಾರ್ ಎಂದು ಹೇಳಿದ್ದು ಎಂದು ಕಿಡಿಕಾರಿದ್ದಾರೆ.
ಸಿದ್ದರಾಮಯ್ಯ ಮುಸ್ಲಿಂ ಲೀಗ್ನ ಸಿಎಂ
ಪಿಎಫ್ಐ ಸಂಘಟನೆಯನ್ನು ತೃಪ್ತಿ ಪಡಿಸಲು ಸಿದ್ದರಾಮಯ್ಯ ಹೀಗೆ ನಡೆದುಕೊಳ್ಳುತ್ತಿದ್ದಾರೆ. ಹಿಂದೂ ವಿರೋಧಿ ಪ್ರಯತ್ನವನ್ನು ಈ ಸರ್ಕಾರ ಮಾಡುತ್ತಿದೆ. ಹಿಂದಿನ ಕಾಂಗ್ರೆಸ್ ಸರ್ಕಾರ ಸಹ ಹೀಗೆ ನಡೆದುಕೊಂಡಿರಲಿಲ್ಲ. ಹೀಗಾಗಿ, ಸಿದ್ದರಾಮಯ್ಯ ಕಾಂಗ್ರೆಸ್ ಸಿಎಂ ಅಲ್ಲ. ಮುಸ್ಲಿಂ ಲೀಗ್ನ ಸಿಎಂ ಎಂದು ಈಶ್ವರಪ್ಪ ಹರಿಹಾಯ್ದಿದ್ದಾರೆ.