Friday, November 22, 2024

ಸಿದ್ದರಾಮಯ್ಯ ರಾಜ್ಯದ ಹುಚ್ಚು ದೊರೆ : ಈಶ್ವರಪ್ಪ

ಶಿವಮೊಗ್ಗ : ಹಿಂದೆ ಮೊಹಮ್ಮದ್ ಬಿನ್ ತೊಘಲಕ್ ಹುಚ್ಚು ದೊರೆ ಇದ್ದ. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಚ್ಚು ದೊರೆ ಆಗಿಬಿಟ್ಟಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಕಿಡಿಕಾರಿದರು.

ಹಿಜಾಬ್ ನಿಷೇಧ ವಾಪಾಸ್ ಪಡೆಯುತ್ತೇವೆ ಎಂಬ ಸಿದ್ದರಾಮಯ್ಯ ಬಗ್ಗೆ ಶಿವಮೊಗ್ಗದಲ್ಲಿ ಅವರು ಪ್ರತಿಕ್ರಿಯಿಸಿದ್ದಾರೆ. ನ್ಯಾಯಾಲಯ ಏನು ಹೇಳುತ್ತೆ ಅಂತ ಅವರಿಗೆ ಗೊತ್ತಿಲ್ಲ. ಸುಪ್ರೀಂ ಕೋರ್ಟ್ ಬಗ್ಗೆ ಗೌರವ ಅವರಿಗಿಲ್ಲ. ಶಿಕ್ಷಣ ಸಚಿವರು ಈ ವಿಚಾರ ಕೋರ್ಟ್ ನಲ್ಲಿ ಇದೆ ಅಂತ ಹೇಳಿದ್ದಾರೆ. ಕೇವಲ ಮುಸಲ್ಮಾನರಿಗೆ ಓಲೈಸುವ ದೃಷ್ಟಿಯಿಂದ ಈ ರೀತಿ ಹೇಳಿಕೆ ನೀಡುವುದು ಸರಿನಾ? ಎಂದು ಗುಡುಗಿದರು.

ಕೋರ್ಟ್ ಏನು ಹೇಳುತ್ತೆ ಎನ್ನುವ ವಿಚಾರ ಇಲ್ಲ. ಸುಪ್ರೀಂ ಕೋರ್ಟ್ ನಲ್ಲಿ ಸಮವಸ್ತ್ರದ ಬಗ್ಗೆ ಚರ್ಚೆ ಆಗುತ್ತಿದೆ. ಈ ಸಂದರ್ಭದಲ್ಲಿ ಹಿಜಾಬ್ ನಿಷೇಧ ರದ್ದು ಮಾಡುತ್ತೇವೆ ಎನ್ನುವ ಹೇಳಿಕೆ ನೀಡಿದ್ದಾರೆ. ಹಾಗಾದರೆ ಸುಪ್ರೀಂ ಕೋರ್ಟ್ ಏನು ಆಯ್ತು? ಮುಸಲ್ಮಾನರನ್ನ ತೃಪ್ತಿ ಪಡಿಸಲು ಸುಪ್ರೀಂ ಕೋರ್ಟ್ ಲೆಕ್ಕಕಿಲ್ಲ ಎನ್ನುವ ರೀತಿ ಮಾತನಾಡುತ್ತಾರೆ. ಸರ್ಕಾರಿ ಆದೇಶ ಇಲ್ಲಿಯವರೆಗೆ ಆಗಿಲ್ಲ. ಮುಖ್ಯಮಂತ್ರಿ ಆಗಿ ಕಾನೂನು ರೀತಿ ನೀತಿ ತಿಳಿದುಕೊಳ್ಳಬೇಕು. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಬೇಡ್ವಾ ನಿಮಗೆ? ಎಂದು ಪ್ರಶ್ನಿಸಿದರು.

ಕೊಲೆ ಆದ್ರೆ ಸಿದ್ದರಾಮಯ್ಯ ನೇರ ಹೊಣೆ

ಕರ್ನಾಟಕದಲ್ಲಿ ಹಿಂದೂ-ಮುಸ್ಲಿಂರು ಬಡಿದಾಡಿಕೊಂಡೇ ಇರಿ ಎನ್ನುವುದು ಸಿದ್ದರಾಮಯ್ಯ ಆಸೆ. ವಿದ್ಯಾರ್ಥಿಗಳಲ್ಲಿ ಸಮವಸ್ತ್ರ ಬೇಕು ಎಂದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಈ ಹಿಂದೆ ರಾಜ್ಯ ಸರ್ಕಾರ (ಬಿಜೆಪಿ ಸರ್ಕಾರ) ಒಂದೇ ಯೂನಿಫಾರ್ಮ್ ಇರಬೇಕು ಅಂತ ಸುಪ್ರೀಂ ಕೋರ್ಟ್ ಗೆ ಹೋಗಿತ್ತು. ಅದು ಈಗ ಸುಪ್ರೀಂ ಕೋರ್ಟ್ ನಲ್ಲಿದೆ. ಅಂಬೇಡ್ಕರ್ ಅವರ ಸಂವಿಧಾನದ ಬಗ್ಗೆ, ಕೋರ್ಟ್ ಬಗ್ಗೆ ನಿಮಗೆ ಗೌರವ ಇದೆಯಾ? ಹಿಂದೂ ಮುಸ್ಲಿಂ ಗಲಾಟೆ ಆದ್ರೆ, ಕೊಲೆ ಆದ್ರೆ, ಸಿದ್ದರಾಮಯ್ಯ ನೇರ ಹೊಣೆ. ಮೊಹಮ್ಮದ್ ಬಿನ್ ತೊಘಲಕ್ ರೀತಿ ಆಡಳಿತ ನಡೆಸುತ್ತಿದ್ದಾರೆ ಎಂದು ಸಿಎಂ ವಿರುದ್ಧ ಈಶ್ವರಪ್ಪ ಹರಿಹಾಯ್ದರು.

RELATED ARTICLES

Related Articles

TRENDING ARTICLES