Friday, November 22, 2024

ವೈಕುಂಠ ಏಕಾದಶಿ: ಮಲ್ಲೇಶ್ವರ ಟಿಟಿಡಿಯಲ್ಲಿ ಹಬ್ಬದ ವಾತಾವರಣ

ಬೆಂಗಳೂರು: ನಾಡಿನೆಲ್ಲೆಡೆ ವೈಕುಂಠ ಏಕಾದಶಿ ಹಬ್ಬದ ಸಂಭ್ರಮ ಮನೆ ಮಾಡಿದೆ.ಪ್ರತಿವರ್ಷದಂತೆ ಈ ಬಾರಿ ಕೂಡ ಮಲ್ಲೇಶ್ವರ ಟಿಟಿಡಿಯಲ್ಲಿ ಸಂಭ್ರಮದ ವಾತವರಣ ಸೃಷ್ಟಿಯಾಗಿದೆ.

ವೈಕುಂಠ ಏಕಾದಶಿ ಪ್ರಯುಕ್ತವಾಗಿಯೇ ದೇವಸ್ಥಾನದ ಸುತ್ತಲೂ ದಕ್ಷಿಣ ಶೈಲಿಯ ಚಪ್ಪರ ಹಾಕಿ ಹೂವಿನಿಂದ ಅಲಾಂಕಾರ ಮಾಡಲಾಗಿದೆ. ಬೆಳಗ್ಗೆ 6 ಗಂಟೆ ಸುಮಾರಿಗೇ ವಿಶೇಷ ಪೂಜೆ ಆರಂಭವಾಗಿದೆ. ವೆಂಕಟೇಶ್ವರನಿಗೆ ಪಂಚಾಭಿಷೇಕ ಮಾಡಿ, ಪುಷ್ಪಾಭಿಷೇಕ ಮಾಡಿ ನಂತರ ವಿಶೇಷ ಅಲಂಕಾರ ಮಾಡಿ ಭಕ್ತದಿಗಳಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ.

ಇದನ್ನೂ ಓದಿ: ಹಿಜಾಬ್ ನಿಷೇಧ ವಾಪಸ್ ಹಿಂದೆ ಸಿಎಂ ಕುತಂತ್ರ ಅಡಗಿದೆ: ಆ‌ರ್. ಅಶೋಕ್

ದೇಗುಲಕ್ಕೆ ಬಂದ ಭಕ್ತರಿಗೆ ಪ್ರಸಾದ ವಿತರಣೆ ನಡೆಯಲಿದೆ. ದೇವಸ್ಥಾನಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಬರುವ ನಿರೀಕ್ಷೆ ಇದ್ದು, ನೂಕು ನುಗ್ಗಲಾಗದಂತೆ ದೇವಸ್ಥಾನದ ಸುತ್ತಲೂ ಬ್ಯಾರೀಕೇಟ್ ಅಳವಡಿಸಲಾಗಿದೆ. ಇನ್ನು, ಕೋವಿಡ್ ಹೆಚ್ಚಾಗುತ್ತಿರುವ ಹಿನ್ನೆಲೆ ಮಾಸ್ಕ್ ಹಾಕಿಕೊಂಡು ಭಕ್ತದಿಗಳು ದೇವಸ್ಥಾನಕ್ಕೆ ಬರಲು ದೇವಸ್ಥಾನದ ಆಡಳಿತ ಮಂಡಳಿ ಸೂಚಿಸಿದೆ‌.‌

ವೈಕುಂಠನಿಗೆ ಬೆಳಗ್ಗೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೂ ವಿಶೇಷ ಪೂಜೆ, ಹೊಮ, ಹವನಗಳು ನೆರವೇರಲಿದ್ದು, ಮಧ್ಯರಾತ್ರಿಯವರೆಗೂ ಭಕ್ತದಿಗಳು ದೇವಸ್ಥಾನಕ್ಕೆ ಬರಲು ಅವಕಾಶ ಮಾಡಿಕೊಡಲಾಗಿದೆ.

ವೈಕುಂಠ ಏಕಾದಶಿ ಅಂದರೆ ಹಿಂದೂಗಳಿಗೆ ಒಂದು ಸಂಭ್ರಮ. ಈ ದಿನ ದೇವಸ್ಥಾನಕ್ಕೆ ಬಂದು ವೈಕುಂಠ ದರ್ಶನ ಮಾಡಿದ್ರೆ ಒಳ್ಳೆಯದಾಗುತ್ತೆ ಎನ್ನೋದು ನಂಬಿಕೆ.‌ ಅಲ್ಲದೇ ಟ್ರಾಫಿಕ್ ಜಾಮ್ ಆಗುವ ಸಾಧ್ಯಾತೆಗಳು ಇರುವುದರಿಂದ ಟ್ರಾಪಿಕ್ ಪೋಲಿಸರನ್ನೂ ನಿಯೋಜನೆ ಮಾಡಲಾಗಿದೆ.‌

 

RELATED ARTICLES

Related Articles

TRENDING ARTICLES