ಬೆಂಗಳೂರು: ಎಲಾನ್ ಮಸ್ಕ್ ಒಡೆತನದ ಎಕ್ಸ್(ಟ್ವಿಟ್ಟರ್)ನಲ್ಲಿ ಸಮಸ್ಯೆ ಕಂಡುಬಂದಿದ್ದು, ಬಳಕೆದಾರರು ಇದರಿಂದ ಪರದಾಡಿದ್ದಾರೆ. ಎಕ್ಸ್ನಲ್ಲಿ ಯೂಸರ್ ಟೈಮ್ಲೈನ್ ಗೋಚರಿಸದೇ ಟ್ವಿಟ್ಟಿಗರಿಗೆ ನಿರಾಸೆಯುಂಟಾಗಿದೆ.
ವಿಶ್ವದಾದ್ಯಂತ ಕೋಟ್ಯಾಂತರ ಜನರು ಟ್ವಿಟ್ಟರ್ ಬಳಸುತ್ತಿದ್ದಾರೆ. ಅನೇಕರು ಇದರ ಮೂಲಕ ಮಾಹಿತಿ ಹಂಚಿಕೊಳ್ಳುತ್ತಾರೆ ಮತ್ತು ಪಡೆಯುತ್ತಾರೆ. ಅಷ್ಟೇ ಏಕೆ ವಿಶ್ವದ ಪ್ರಮುಖ ನಾಯಕರು ಕೂಡ ಟ್ವಿಟ್ಟರ್ನಲ್ಲಿ ಖಾತೆ ಹೊಂದಿದ್ದಾರೆ. ಆದರೆ ಗುರುವಾರದಂದು ಬೆಳಗ್ಗಿನಿಂದಲೇ ಟ್ವಿಟ್ಟರ್ನಲ್ಲಿ ಸಮಸ್ಯೆ ಕಾಡಲಾರಂಭಿಸಿದೆ.
ಇದನ್ನೂ ಓದಿ: Love affair : ಪ್ರಿಯಕರ ಪೋಲಿಸಪ್ಪನನ್ನ ಬೆಂಕಿ ಹಚ್ಚಿಕೊಂದ ಲೇಡಿ ಹೋಂ ಗಾರ್ಡ್ : ಕಾರಣ ಕೇಳಿದ್ರೆ ಬೆಚ್ಚಿ ಬೀಳ್ತೀರಾ!
ಇನ್ನು ಟ್ವಿಟ್ಟರ್ನಲ್ಲಿ ಕಾಣಿಸಿಕೊಂಡ ಸಮಸ್ಯೆ ಬಗ್ಗೆ ಅನೇಕರು ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದಾರೆ. ಇನ್ನು ಕೆಲವರು ಇಂಥಾ ಸಮಸ್ಯೆ ನಿಮಗೂ ಕಾಡುತ್ತಿದೆಯಾ? ಎಂದು ಪ್ರಶ್ನಿಸಿದ್ದಾರೆ. ಒಟ್ಟಿನಲ್ಲಿ ಇದಾವುದಕ್ಕೆ ಟ್ವಿಟ್ಟರ್ ಉತ್ತರಿಸದೇ ಇರುವುದು ಬಳಕೆದಾರರಿಗೆ ಅಚ್ಚರಿ ಮೂಡಿಸಿದೆ.