Thursday, December 26, 2024

ಕಾಂಗ್ರೆಸ್​ ಸರ್ಕಾರ 100ಕ್ಕೆ 100ರಷ್ಟು ದಿವಾಳಿಯಾಗಿದೆ : ಆರ್. ಅಶೋಕ್

ಬೆಂಗಳೂರು : ಕರ್ನಾಟಕಕ್ಕೆ ಮೊದಲು ಬರ ಪರಿಹಾರ ಬಿಡುಗಡೆ ಮಾಡಲ್ಲ. ನಿಮ್ಮ ಪಾಲಿನ ಹಣ ಬಿಡುಗಡೆ ಮಾಡಿ ಎಂದು ರಾಜ್ಯ ಸರ್ಕಾರಕ್ಕೆ ವಿರೋಧ ಪಕ್ಷದ ನಾಯಕ ಆರ್. ಆಶೋಕ್ ಒತ್ತಾಯಿಸಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಮ್ಮಲ್ಲಿ ಹಸಿರು ಬರ ಇದೆ. ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೂ ಒಂದೇ ಸಲ ಬಿಡುಗಡೆ ಮಾಡುವುದು ಎಂದು ಹೇಳಿದರು.

ರಾಜ್ಯದಲ್ಲಿ ಭೀಕರ ಬರ ಇದೆ. ಬರ ಪರಿಹಾರ 2,000 ರೂ. ಕೊಡ್ತೀವಿ ಅಂತಾರೆ. ಆನೆ ಹುಟ್ಟೆಗೆ ಅರೆಕಾಸಿನ ಮಜ್ಜಿಗೆ ಗಾದೆ ಮಾತಿನಂತೆ ಆಗಿದೆ. ರೈತರಿಗೆ ಬರ ಪರಿಹಾರ ಕೊಡುವಲ್ಲೂ ವಿಫಲವಾಗಿದೆ. ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಅವಕಾಶ ಕೊಟ್ಟಿದ್ದಾರೆ. ಅಮಿತ್ ಶಾ ಭೇಟಿ ಸಹ ಆಗಿದೆ. ಕೂಡಲೇ ರಾಜ್ಯ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದರು.

ಸರ್ಕಾರ 100ಕ್ಕೆ 100ರಷ್ಟು ದಿವಾಳಿಯಾಗಿದೆ

ಉಚಿತ ಗ್ಯಾರಂಟಿ ಯೋಜನೆಗಳಿಗೆ ಹಣ ಕೊಡಲು ಆಗ್ತಿಲ್ಲ. ಈ ಸರ್ಕಾರ 100ಕ್ಕೆ 100ರಷ್ಟು ದಿವಾಳಿಯಾಗಿದೆ. ನಾವು ಪರಿಹಾರ ಕೊಟ್ಟಿದ್ದೆವು. ಅಷ್ಟೇ ಪರಿಹಾರ ಇವರು ಕೊಡಬೇಕಿತ್ತು. ಯಾವ ಗ್ಯಾರಂಟಿಯೂ ಸರಿಯಾಗಿ ಈಡೇರಿಸಿಲ್ಲ. ಈ ಸರ್ಕಾರ ಆರ್ಥಿಕವಾಗಿ ಸಂಪೂರ್ಣ ದಿವಾಳಿಯಾಗಿದೆ ಎಂದು ಕುಟುಕಿದರು.

ಸಿದ್ದರಾಮಯ್ಯ ಬೋಗಸ್ ಭಾಷಣ ಮಾಡಿದ್ರು

ಸದನದಲ್ಲಿ ವಿಪಕ್ಷಗಳು ಎತ್ತಿದ ಯಾವುದೇ ಪ್ರಶ್ನೆಗೂ ಉತ್ತರ ಕೊಡಲಿಲ್ಲ. ಉತ್ತರ ಕರ್ನಾಟಕದ ನೀರಾವರಿ ಬಗ್ಗೆ ಮಾತನಾಡಲಿಲ್ಲ. ಬರದ ಬಗ್ಗೆ ಚಕಾರ ಎತ್ತಲಿಲ್ಲ. ಮಹಿಳೆಯರ ಕಾಲೇಜು ಆಗಬೇಕು ಅಂದ್ರು ಉತ್ತರ ಕೊಡಲಿಲ್ಲ. ಸಿಎಂ ಸಿದ್ದರಾಮಯ್ಯ ಬೋಗಸ್ ಭಾಷಣ ಮಾಡಿದರು. ಘೋಷಣೆ ಮಾಡಲು ಸರ್ಕಾರದಲ್ಲಿ ಹಣ ಇಲ್ಲ ಅನ್ನೋದು ಗೊತ್ತಾಗಿದೆ ಎಂದು ಆರ್. ಅಶೋಕ್ ವಾಗ್ದಾಳಿ ನಡೆಸಿದರು.

RELATED ARTICLES

Related Articles

TRENDING ARTICLES