ಬೆಂಗಳೂರು : ಸ್ಯಾಂಡಲ್ವುಡ್ ಬಾಕ್ಸ್ ಆಫೀಸ್ ಸುಲ್ತಾನ್ ನಟ ದರ್ಶನ್ ತೂಗುದೀಪ ಅಭಿನಯದ ಬಹು ನಿರೀಕ್ಷಿತ ‘ಕಾಟೇರ’ ಚಿತ್ರಕ್ಕೆ ಸಂಕಷ್ಟ ಎದುರಾಗಿದೆ.
ಕಾಟೇರ ಸಿನಿಮಾದ ಸಂಭಾಷಣೆಯೊಂದರ ವಿರುದ್ಧ ವನ್ಯಜೀವಿ ಸಂರಕ್ಷಣಾ ಒಕ್ಕೂಟವು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ದೂರು ನೀಡಿದೆ.
ಕಳೆದ ಎರಡು ದಿನಗಳ ಹಿಂದೆಯಷ್ಟೇ ‘ಕಾಟೇರ’ ಚಿತ್ರದ ಟ್ರೈಲರ್ ಹುಬ್ಬಳ್ಳಿಯಲ್ಲಿ ಅದ್ದೂರಿಯಾಗಿ ರಿಲೀಸ್ ಆಗಿತ್ತು. ಸ್ವತಃ ನಾಡದೊರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ರೈಲರ್ ಬಿಡುಗಡೆಗೊಳಿಸಿ, ಶುಭ ಹಾರೈಸಿದ್ದರು. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಹ ಟ್ರೈಲರ್ ಮೆಚ್ಚಿ, ಡಿ ಬಾಸ್ ನಟನೆಯನ್ನು ಕೊಂಡಾಡಿದ್ದರು.
ಟ್ರೈಲರ್ನಲ್ಲಿ ಬುಲೆಟ್ ದಾಳಿಯಂತೆ ಮಾಸ್ ಡೈಲಾಗ್ಗಳು ಇವೆ. ಈ ಪೈಕಿ ‘ಇವರೆಲ್ಲಾ ಹಾವು ಇದ್ದಂಗೆ. ವಿಷ ಇಲ್ಲ ಅಂದ್ರೆ ಹಿಡೀಬೇಕು. ವಿಷ ಇದ್ದರೆ ಹೊಡಿಬೇಕು’ ಎಂಬ ಡೈಲಾಗ್ ಇದೆ. ಇದು ಸಾರ್ವಜನಿಕರಿಗೆ ಪ್ರಚೋದನೆ ನೀಡುವಂತಿದೆ ಎಂದು ವನ್ಯಜೀವಿ ಸಂರಕ್ಷಣಾ ಒಕ್ಕೂಟ ದೂರಿನಲ್ಲಿ ಉಲ್ಲೇಖಿಸಿದೆ.
ನಮಸ್ಕಾರ ಸ್ನೇಹಿತರೇ
ಇಂದು #Kaatera ಚಿತ್ರ ತಂಡದ ವಿರುದ್ದ ದೂರು ನೀಡಿರುವ ಪ್ರಸನ್ನ ಕುಮಾರ್ ನಿಕಟಪೂರ್ವ ವನ್ಯಜೀವಿ ಪರಿಪಾಲಕರಿಗೆ ನನದೊಂದು ಪ್ರಶ್ನೆ… pic.twitter.com/dfbu8zk5M3— D Company(R)Official (@Dcompany171) December 18, 2023