Tuesday, November 5, 2024

ರೋಹಿತ್ ನಾಯಕತ್ವ ಅಂತ್ಯ : ಮುಂಬೈ ತಂಡಕ್ಕೆ ಹಾರ್ದಿಕ್ ಪಾಂಡ್ಯ ನೂತನ ನಾಯಕ

ಬೆಂಗಳೂರು : ಭಾರತದ ಸ್ಟಾರ್ ಆಲ್​ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಮುಂಬೈ ಇಂಡಿಯನ್ಸ್​ ತಂಡದ ನೂತನ ನಾಯಕರಾಗಿ ನೇಮಕಗೊಂಡಿದ್ದಾರೆ.

ಮುಂಬೈ ಇಂಡಿಯನ್ಸ್​ ಮ್ಯಾನೇಜ್​ಮೆಂಟ್ ಮಹತ್ವದ ನಿರ್ಧಾರ ಕೈಗೊಂಡಿದೆ. ಹಾರ್ದಿಕ್ ಪಾಂಡ್ಯ ಅವರನ್ನು ಐಪಿಎಲ್​ 2024 ಸೀಸನ್​ಗೆ ನಾಯಕನನ್ನಾಗಿ ನೇಮಿಸಲಾಗಿದೆ ಎಂದು ಅಧಿಕೃತವಾಗಿ ಪ್ರಕಟಿಸಿದೆ.

ಇತ್ತೀಚೆಗಷ್ಟೇ ಹಾರ್ದಿಕ್ ಪಾಂಡ್ಯ ಅವರನ್ನು ಗುಜರಾತ್ ಟೈಟಾನ್ಸ್​ನಿಂದ ಟ್ರೇಡ್ ಮೂಲಕ ಸ್ವಾಧೀನಪಡಿಸಿಕೊಂಡ ಮುಂಬೈ ತಂಡ ತಕ್ಷಣವೇ ಅವರಿಗೆ ಪ್ರಮುಖ ಜವಾಬ್ದಾರಿಯನ್ನು ನೀಡಿದೆ. ಅಲ್ಲದೆ, ಪಾಂಡ್ಯಗೆ ಆಲ್​ ದಿ ಬೆಸ್ಟ್​ ಹೇಳಿದೆ.

ಮುಂಬೈ ತಂಡದ ನಾಯಕನಾಗಿ ರೋಹಿತ್ ಶರ್ಮಾ ಅವರ ಸೇವೆಗಾಗಿ ಪ್ರಶಂಸೆ ವ್ಯಕ್ತಪಡಿಸಿದೆ. ಅಲ್ಲದೆ, ಮೈದಾನದ ಒಳಗೆ ಹಾಗೂ ಹೊರಗೆ ರೋಹಿತ್ ತಂಡದ ಜೊತೆ ಇರುತ್ತಾರೆ ಎಂದು ಮುಂಬೈ ಮ್ಯಾನೇಜ್​ಮೆಂಟ್ ತಿಳಿಸಿದೆ. ಈ ನಿರ್ಧಾರದಿಂದ ರೋಹಿತ್ ಶರ್ಮಾ ಅವರ ಭವಿಷ್ಯ ಚರ್ಚೆಗೆ ಗ್ರಾಸವಾಗಿದೆ.

ರೋಹಿತ್ ಫ್ಯಾನ್ಸ್​ ಹಾರ್ಟ್​ ಛಿದ್ರ!

ಮುಂಬೈ ತಂಡದ ನಾಯಕರಾಗಿ ರೋಹಿತ್ ಬದಲಿಗೆ ಪಾಂಡ್ಯ ಅವರನ್ನು ಆಯ್ಕೆ ಮಾಡಲಾಗಿದೆ. ಇದರಿಂದ ರೋಹಿತ್ ಶರ್ಮಾ ಅಭಿಮಾನಿಗಳು ತೀವ್ರ ನಿರಾಸೆಗೊಂಡಿದ್ದಾರೆ. ಮುಂಬೈಗೆ ಐದು ಬಾರಿ ಐಪಿಎಲ್​ ಟ್ರೋಫಿ ಗೆಲ್ಲಿಸಿಕೊಟ್ಟ ರೋಹಿತ್​ ಅವರನ್ನು ಕಡೆಗಣಿಸಿರುವುದು ಸರಿಯಲ್ಲ. ರೋಹಿತ್ ಐಪಿಎಲ್​ನಲ್ಲಿ ಅತ್ಯಂತ ಯಶಸ್ವಿ ನಾಯಕ. ಐಪಿಎಲ್​ನಿಂದ ಅವರು ನಿವೃತ್ತಿಯಾಗುವವರೆಗೂ ಅವರೇ ನಾಯಕರಾಗಿ ಮುಂದುವರಿಯಬೇಕು ಎಂದು ಫ್ಯಾನ್ಸ್​ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮುಂಬೈನಲ್ಲಿ ಒಂದು ಯುಗಾಂತ್ಯ

ಮುಂಬೈನಲ್ಲಿ ಒಂದು ಯುಗಾಂತ್ಯವಾಗಿದೆ. ರೋಹಿತ್ ಶರ್ಮಾ ತಮ್ಮ ಅಸಾಧಾರಣ ನಾಯಕತ್ವದೊಂದಿಗೆ ಮುಂಬೈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದೀಗ, ಆಟಗಾರನಾಗಿ ಕಾಣಿಸಿಕೊಳ್ಳಲಿದ್ದಾರೆ. 2013ರಲ್ಲಿ ಮುಂಬೈ ನಾಯಕತ್ವ ವಹಿಸಿಕೊಂಡ ರೋಹಿತ್ ಐದು ಬಾರಿ ಮುಂಬೈ ತಂಡವನ್ನು ಚಾಂಪಿಯನ್​ ಮಾಡಿದ್ದರು. 2013, 2015, 2017, 2019, 2020ರಲ್ಲಿ ಟ್ರೋಫಿ ಎತ್ತಿಹಿಡಿದಿದ್ದರು.

RELATED ARTICLES

Related Articles

TRENDING ARTICLES