ಚಿತ್ರದುರ್ಗ : ಬಸವ ಪುತ್ಥಳಿ ನಿರ್ಮಾಣದ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಗೆ ಜಿಲ್ಲಾಧಿಕಾರಿ ದಿವ್ಯಪ್ರಭು ನಾಲ್ವರು ಅಧಿಕಾರಿಗಳು ಒಳಗೊಂಡ ಸಮಿತಿ ರಚಿಸಿ ಆದೇಶ ಹೊರಡಿಸಿದ್ದಾರೆ.
15 ದಿನದೊಳಗೆ ತನಿಖಾ ವರದಿ ನೀಡುವಂತೆ ಸಮಿತಿಗೆ ಸೂಚಿಸಿದ್ದಾರೆ. ಮಠದ ಹಿಂಭಾಗ 28 ಕೋಟಿ 20 ಲಕ್ಷ ವೆಚ್ಚದಲ್ಲಿ ಬಸವ ಪುತ್ಥಳಿ ನಿರ್ಮಾಣ ಮಾಡಲು ಮುರುಘಾಮಠ ಯೋಜನೆ ರೂಪಿಸಿದೆ. ರಾಜ್ಯ ಸರ್ಕಾರದಿಂದ ಈವರೆಗೆ 35ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. 24 ಕೋಟಿ 50ಲಕ್ಷ ರೂ. ಈವರೆಗೆ ಹಣ ಖರ್ಚಾಗಿದೆ ಎಂದು ಮಠ ಲೆಕ್ಕ ತೋರಿಸಿದೆ.
ಇದನ್ನೂ ಓದಿ: ಕಾಂಗ್ರೆಸ್ ಶಾಸಕರಿಗೆ ಭೋಜನ ಕೂಟ ಆಯೋಜನೆ ಮಾಡಿದ ಡಿಕೆಶಿ!
ಟೆಂಡರ್ ಕರೆಯದೆ 4 ಕೋಟಿ ಮೌಲ್ಯದ ಕಬ್ಬಿಣ, ಸಿಮೆಂಟ್ ಖರೀದಿಸಿದ್ದಾರೆ ಹಾಗೂ ಪ್ರತಿಮೆ ನಿರ್ಮಾಣಕ್ಕೆ ನಿಯಮ ಮೀರಿ ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.