Sunday, November 17, 2024

ಆರ್ಟಿಕಲ್ 370 ರದ್ದು : ಇದು ಸಂವಿಧಾನಕ್ಕೆ ದೊರೆತ ಗೆಲುವು : ಆರಗ ಜ್ಞಾನೇಂದ್ರ

ಬೆಳಗಾವಿ : ಆರ್ಟಿಕಲ್ 370 ರದ್ದು ಮಾಡಿದ್ದನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿರುವ ವಿಚಾರ ಕುರಿತು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸ್ವಾತಂತ್ರ್ಯ ನಂತರ ನಮ್ಮ ಎಡವಟ್ಟಿನಿಂದಾಗಿ ಸಂವಿಧಾನದಲ್ಲಿ ಜಮ್ಮು ಕಾಶ್ಮೀರಕ್ಕೆ ಪ್ರತ್ಯೇಕ ಕಾನೂನು ಇತ್ತು. ಇದು ಸಂವಿಧಾನಕ್ಕೆ ದೊರೆತ ಗೆಲುವು ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

370 ವಿಶೇಷ ಸ್ಥಾನಮಾನ ಖಂಡಿಸಿ ಬಿಜೆಪಿ ಪ್ರತಿಭಟನೆ ನಡೆಸುತ್ತಿತ್ತು. ಏಕ್ ಸಂವಿಧಾನ್, ಏಕ್ ಅನುಸಂಧಾನ್, ಏಕ್ ಕಾನೂನ್ ಹೆಸರಲ್ಲಿ ಹೋರಾಟ ನಡೆಸಲಾಗಿತ್ತು. ನಮ್ಮ ನಾಯಕ ಕಾಶ್ಮೀರದಲ್ಲಿ ಆಹುತಿಯಾದರು. ಈ ಹೋರಾಟದ ಪರಿಣಾಮ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ 360 ರದ್ದು ಮಾಡುವ ಕ್ರಮ ತೆಗೆದುಕೊಂಡಿತ್ತು. ಪಾರ್ಲಿಮೆಂಟ್‌ನಲ್ಲಿ ಹೋರಾಟ ಮಾಡಿದ್ವಿ‌. ಇದು ಸುಪ್ರೀಂ ಕೋರ್ಟ್ ಗೆ ಹೋಗಿತ್ತು ಎಂದು ಹೇಳಿದ್ದಾರೆ.

ಬಿಜೆಪಿ ಬಂದ್ಮೇಲೆ ನಿರ್ಣಯಕ್ಕೆ ಸಿಕ್ಕ ಜಯ

ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರದ ತೀರ್ಮಾನವನ್ನು ಎತ್ತಿ ಹಿಡಿದಿದೆ. ಇದು ಐತಿಹಾಸಿಕ ತೀರ್ಪು. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ನಿರ್ಣಯಕ್ಕೆ ಸಿಕ್ಕ ಜಯ. 2024ರ ಒಳಗೆ ಚುನಾವಣೆ ನಡೆಯಬೇಕು ಅಂತ ಹೇಳಿದೆ. ಕೇಂದ್ರ ಚುನಾವಣೆ ನಡೆಸಲಿದೆ. ಮಿಲಿಟರಿಗೆ ಕಲ್ಲು ಹೊಡೆಯೋದು ನಿಂತಿದೆ. ಈಗ ಟೂರಿಸಂ ರಸ್ತೆಯಾಗಿದೆ. ಈ ದೇಶದ ಒಬ್ಬೊಬ್ಬ ನಾಗರಿಕನಿಗೂ ಸಂತೋಷ ಕೊಡುವ ನಿರ್ಧಾರ ಇದು ಎಂದು ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES