Monday, November 25, 2024

ಅಥಣಿ ತಾಲೂಕು ಜಿಲ್ಲೆ ಆಗಬೇಕು : ಲಕ್ಷ್ಮಣ ಸವದಿ

ಬೆಳಗಾವಿ : ಅಖಂಡ ಬೆಳಗಾವಿ ಜಿಲ್ಲೆಯಲ್ಲಿ ಕೊನೆಯ ತಾಲೂಕು ಅಥಣಿ. ಆಡಳಿತ ಇನ್ನಷ್ಟು ಜನರ ಸಮೀಪ ತರುವುದಕ್ಕೆ ಅಥಣಿ ಜಿಲ್ಲೆ ಆಗಬೇಕು. ಕುರಿತು ನಾನು ಸದನದಲ್ಲಿ ಸರ್ಕಾರದ ಗಮನವನ್ನು ಸೆಳೆಯುತ್ತೇನೆ ಎಂದು ಮಾಜಿ ಡಿಸಿಎಂ ಹಾಗೂ ಶಾಸಕ ಲಕ್ಷ್ಮಣ ಸವದಿ ಹೇಳಿದರು.                                    

ಬೆಳಗಾವಿ ವಿಭಜಿಸಿ ಅಥಣಿ ಪ್ರತ್ಯೇಕ ಜಿಲ್ಲಾ ರಚನೆ ಬೇಡಿಕೆ ಬಗ್ಗೆ ಅಥಣಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಥಣಿ ಸುತ್ತಮುತ್ತಲಿನ ಶಾಸಕರು ಬೆಂಬಲ ಸೂಚಿಸಿದ್ದಾರೆ ಎಂದು ತಿಳಿಸಿದರು.

ಅಥಣಿ ಜಿಲ್ಲಾ ಕೇಂದ್ರಕ್ಕೆ ಶಾಸಕರು ಕೂಡ ಸದನದಲ್ಲಿ ಧ್ವನಿ ಎತ್ತುತ್ತಾರೆ. ಸಿಎಂ ಸಿದ್ದರಾಮಯ್ಯ ಅವರನ್ನು ಖುದ್ದಾಗಿ ಭೇಟಿ ಮಾಡಿ ಈ ಭಾಗದ ಜನರ ಭಾವನೆಯ ಬಗ್ಗೆ ಪ್ರಸ್ತಾಪ ಸಲ್ಲಿಸುತ್ತೇನೆ. ಚಿಕ್ಕೋಡಿ ಗೋಕಾಕ್ ಜಿಲ್ಲಾ ರಚನೆಗೆ ಕೂಗು ಬರುತ್ತೆ. ಈ ಮಧ್ಯದಲ್ಲಿ ಬೈಲಹೊಂಗಲ ಜಿಲ್ಲಾ ರಚನೆ ಬೇಡಿಕೆ ಬರುತ್ತಿದೆ. ಗಂಡ-ಹೆಂಡತಿ ನಡುವೆ ಕೂಸು ಬಡವಾಯಿತು ಎಂಬಂತಾಗಿದೆ ಅಥಣಿ ಜನರ ಸ್ಥಿತಿ ಎಂದು ಬೇಸರಿಸಿದರು.

ಗೋಕಾಕ್, ಚಿಕ್ಕೋಡಿ ಜಿಲ್ಲೆಯಾದರೆ ತಕರಾರು ಇಲ್ಲ

ಜಿಲ್ಲಾ ರಚನೆಯಲ್ಲಿ ಯಾವುದೇ ರಾಜಕೀಯ ಹೋರಾಟಗಳು ನಡೆಯುತ್ತಿಲ್ಲ. ಈ ಭಾಗದ ಜನಪ್ರತಿನಿಧಿಯಾಗಿ ನಾನು ಸರ್ಕಾರದ ಗಮನವನ್ನು ಸೆಳೆಯುತ್ತೇನೆ. ಗೋಕಾಕ್, ಚಿಕ್ಕೋಡಿ ಜಿಲ್ಲೆಯಾದರೆ ನನ್ನ ತಕರಾರು ಏನು ಇಲ್ಲ. ಆದರೆ, ಅಥಣಿ ಜಿಲ್ಲೆ ರಚನೆ ಆಗಬೇಕು ಎಂಬುದು ಇಲ್ಲಿನ ಜನರ ಆಗ್ರಹ. ನಾನು ಸರ್ಕಾರಕ್ಕೆ ಈ ವಿಚಾರವನ್ನು ಸಲ್ಲಿಸುತ್ತೇನೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

RELATED ARTICLES

Related Articles

TRENDING ARTICLES