ಬೆಂಗಳೂರು: ಕನ್ನಡದ ಮೇರು ನಟಿ ಲೀಲಾವತಿ ಅವರು ವಯೋಸಹಜ ಕಾಯಿಲೆಯಿಂದ ನಿನ್ನೆ ನಿಧನರಾಗಿದ್ದಾರೆ.ಇಂದು ಅವರ ಅಂತಿಮ ದರ್ಶನವನ್ನ ಬೆಳಗ್ಗೆ 5:30ರಿಂದ 10 ಗಂಟೆಯ ವರೆಗೆ ನೆಲಮಂಗಲದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಸಾರ್ವಜನಿಕರ ವ್ಯವಸ್ಥೆ ಮಾಡಿಕೊಂಡಲಾಗಿದೆ.
ಮಧ್ಯಾಹ್ನ 2:30ರವರೆಗೆ ಸಾರ್ವಜನಿಕರು ಹಾಗೂ ಚಿತ್ರರಂಗದ ಗಣ್ಯರ ಅಂತಿಮ ದರ್ಶನಕ್ಕೆ ವ್ಯವಸ್ಥೆಯನ್ನೂ ಕೊಡ ಕಲ್ಪಿಸಲಾಗಿದೆ.
3 ಗಂಟೆಯ ನಂತರ ಸೋಲದೇವನಹಳ್ಳಿಯ ತೋಟದಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು
ಮಾಧ್ಯಮಗಳಿಗೆ ಜಿಲ್ಲಾಧಿಕಾರಿ ಹೇಳಿಕೆ ನೀಡಿದ್ಧಾರೆ.
ಸಾರ್ವಜನಿಕರೆಲ್ಲರೂ ಶಾಂತಿಯಿಂದ ಸಹಕರಿಸಿ,ಎಲ್ಲರಿಗೂ ಅವರ ಅಂತಿಮ ದರ್ಶನ ಸಿಗುವಂತೆ ವ್ಯವಸ್ಥೆ ಮಾಡುತ್ತೇವೆ ಎಂದಿದ್ದಾರೆ. ನೆಲಮಂಗಲ ಪೊಲೀಸರು ಹಾಗೂ ತಹಶಿಲ್ದಾರ್ ಅರುಂಧತಿ ನೇತೃತ್ವದಲ್ಲಿ ಮೈದಾನದಲ್ಲಿ ತಯಾರಿ ಮಾಡಲಾಗುತ್ತಿದೆ.