ಮಿಜೋರಂ: ರಾಜಧಾನಿ ಐಜ್ವಾಲ್ ನಲ್ಲಿ ನೂತನ ಮುಖ್ಯಮಂತ್ರಿಯಾಗಿ ಝೋರಂ ಪೀಪಲ್ಸ್ ಮೂವ್‌ಮೆಂಟ್‌ನ (ಝಡ್‌ಪಿಎಂ) ಪಕ್ಷದ ಅಧ್ಯಕ್ಷ ಲಾಲ್ಟುಹೋಮಾ ಅವರು ಇಂದು ಪ್ರಮಾಣ ವಚನ ಸ್ವೀಕರಿಸಿದರು.
ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಹರಿಬಾಬು ಕಂಭಂಪತಿ ಪ್ರತಿಜ್ಞಾವಿಧಿ ಬೋಧಿಸಿದರು.
ಈ ವೇಳೆ 11 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. 40 ಸದಸ್ಯ ಬಲದ ಮಿಜೋರಾಂನಲ್ಲಿ ಝಡ್‌ಪಿಎಂ ಪಕ್ಷ 27 ಸ್ಥಾನಗಳನ್ನು ಗೆದ್ದುಕೊಳ್ಳುವ ಮೂಲಕ ಬಹುಮತ ಸಾಧಿಸಿದೆ.
ಇದನ್ನೂ ಓದಿ: ಶಿಕ್ಷಕನ ಹೀನ ಕೃತ್ಯಕ್ಕೆ ಬೆಚ್ಚಿಬಿದ್ದ ಗ್ರಾಮ: ಕಾಮುಕ ಶಿಕ್ಷಕ ಅರೆಸ್ಟ್!
ಇತ್ತೀಚೆಗೆ ನಡೆದ ರಾಜಸ್ಥಾನ, ಮಧ್ಯಪ್ರದೇಶ,ಛತ್ತಿಸ್ಗಡ್, ತೆಲಂಗಾಣ, ಮಿಜೋರಾಂ ವಿಧಾನಸಭಾ ಚುನಾವಣೆಗಳ ಪೈಕಿ ತೆಲಂಗಾಣ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಅಧಿಕಾರಕ್ಕೆರಿದರೇ ರಾಜಸ್ಥಾನ, ಮಧ್ಯಪ್ರದೇಶ, ಛತ್ತಿಸ್ಗಡ್ನಲ್ಲಿ ಬಿಜೆಪಿ ವಿಜಯಪಥಾಕೆ ಹಾರಿಸಿದೆ. ಇನ್ನು, ಮಿಜೋರಾಂನಲ್ಲಿ ನೂತನ ಸ್ಥಳೀಯ ಪಕ್ಷ ಝೋರಂ ಪೀಪಲ್ಸ್ ಮೂವ್ಮೆಂಟ್ ಅಧಿಕಾರಕ್ಕೇರದ ಚುಕ್ಕಾಣಿ ಹಿಡಿದಿದೆ.
Pu Lalduhoma, Chief Ministerial candidate from Zoram Peoples Movement called on the Governor’s office this morning and staked claim to form government in the state.
I appointed him as Chief Minister and invited him to form the Government. The swearing-in ceremony is fixed on 8th… pic.twitter.com/E19jXr5TAu
— Dr. Hari Babu Kambhampati (@DrHariBabuK) December 6, 2023