ದಾವಣಗೆರೆ : ಕುಡಿಯುವ ನೀರಿನ ಘಟಕ ಕಲುಷಿತಗೊಂಡಿರುವ ಪ್ರಕರಣ ಸಂಬಂಧ ಪಿಡಿಓನ ಅಮಾನತುಗೊಳಿಸಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ದಾವಣಗೆರೆ ತಾಲೂಕಿನ ನೀರ್ಥಡಿ ಗ್ರಾಮದಲ್ಲಿ ಕೆಸರು ಮಿಶ್ರಿತ ನೀರು ಬರುತ್ತಿದ್ದು ಈ ಕುರಿತು ನಿಮ್ಮ ಪವರ್ ಟಿವಿ ಈ ನೀರು ಕುಡಿದ್ರೆ ಶಿವನ ಪಾದ ‘ಗ್ಯಾರಂಟಿ’ ಎಂಬ ಶೀರ್ಷಿಕೆಯಡಿ ಸುದ್ದಿ ಬಿತ್ತರಿಸಿತ್ತು. ಪವರ್ ವರದಿಯಲ್ಲಿ ಕೆಸರು ಮಿಶ್ರಿತ ನೀರು ನೋಡಿದ ಶಾಸಕರೇ ಖುದ್ದು ದಂಗಾಗಿದ್ದರು.
ಈ ಕಲುಷಿತ ನೀರಿನ ಸೇವನೆಯಿಂದಾಗಿ ಗ್ರಾಮಸ್ಥರು ನಾನಾ ಕಾಯಿಲೆಗಳಿಂದ ಬಳಲುತ್ತಿದ್ದರು. ಹೀಗಾಗಿ, ಅಧಿಕಾರಿಗಳ ನಿರ್ಲಕ್ಷ್ಯ ಬಗ್ಗೆ ವಿಸ್ತೃತ ವರದಿ ಪ್ರಸಾರ ಮಾಡಿದ್ದಂತೆ ಎಚ್ಚೆತ್ತ ಜಿಲ್ಲಾ ಪಂಚಾಯಿತಿ ಸಿಇಓ ಸುರೇಶ್ ಹಿಟ್ನಾಳ್ ಪಿಡಿಓನ ಅಮಾನತುಗೊಳಿಸಿದ್ದಾರೆ. ಅಲ್ಲದೇ, ಶುದ್ಧ ನೀರಿನ ಘಟಕವನ್ನ ರಿಪೇರಿ ಮಾಡಿಸಿ, ಸ್ವಚ್ಛಗೊಳಿಸಿದೆ. ಸದ್ಯ ಪವರ್ ಟಿವಿ ಕಾರ್ಯಕ್ಕೆ ನಿರ್ಥಡಿ ಗ್ರಾಮಸ್ಥರು ತಿಳಿಸಿದ್ದು, ಇದು ಪವರ್ ಟಿವಿ ವರದಿಯ ಬಿಗ್ ಇಂಪ್ಯಾಕ್ಟ್ ಆಗಿದೆ.