Thursday, December 12, 2024

ಹಾಡಹಗಲೇ ವಕೀಲನ ಭೀಕರ ಹತ್ಯೆ: ಬೆಚ್ಚಿ ಬಿದ್ದ ಜನತೆ!

ಕಲಬುರಗಿ: ಹಾಡಹಗಲೇ ವಕೀಲರೊಬ್ಬರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಬಳಿಕ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಸಾಯಿ ಮಂದಿರದ ಬಳಿ ಇರುವ ಅಪಾರ್ಟ್​ಮೆಂಟ್​ ಬಳಿ ನಡೆದಿದೆ.

ಹತ್ಯೆಯಾದ ವ್ಯಕ್ತಿಯನ್ನು ಈರಣ್ಣಗೌಡ ಪಾಟೀಲ (40) ವರ್ಷ ಎಂದು ಗುರುತಿಸಲಾಗಿದ್ದು, ಜಮೀನು ವಿವಾದಕ್ಕೆ ಸಂಬಂಧಿಸಿ ಸಂಬಂಧಿಕರಿಂದಲೇ ವಕೀಲ ಈರಣ್ಣನನ್ನು ಹತ್ಯೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ವಕೀಲನ ಕೊಲೆಗೆ ಯತ್ನಿಸಿದ ದೃಶ್ಯಗಳು ಸಿಸಿಟಿಯಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ತೆಲಂಗಾಣದ ಎರಡನೇ ಮುಖ್ಯಮಂತ್ರಿಯಾಗಿ ರೇವಂತ್​ ರೆಡ್ಡಿ ಪ್ರಮಾಣ ವಚನ ಸ್ವೀಕಾರ!

ವಿಚಾರ ತಿಳಿಯುತ್ತಲೇ ಘಟನಾ ಸ್ಥಳಕ್ಕೆ ವಿವಿ ಪುರ ಠಾಣೆ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES