Friday, November 22, 2024

ಪಿಒಕೆ ನಮ್ಮದು.. ಕಾಶ್ಮೀರಕ್ಕಾಗಿ 24 ಸ್ಥಾನ ಮೀಸಲು : ಅಮಿತ್ ಶಾ

ನವದೆಹಲಿ : ಪಿಒಕೆ ನಮ್ಮದೇ.. ಜಮ್ಮು ಕಾಶ್ಮೀರ ವಿಧಾನಸಭೆಯಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕಾಗಿ 24 ಸ್ಥಾನಗಳನ್ನು ಮೀಸಲಿಡಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.

ಲೋಕಸಭೆಯಲ್ಲಿ ಜಮ್ಮು ಕಾಶ್ಮೀರ ಮೀಸಲಾತಿ ಮಸೂದೆಯನ್ನು ಮಂಡಿಸಿ ಮಾತನಾಡಿದ ಅವರು, ಜಮ್ಮುವಿನಲ್ಲಿ ಈ ಹಿಂದೆ 37 ಸ್ಥಾನಗಳಿದ್ದವು. ಈ ಸಂಖ್ಯೆಯನ್ನು 43ಕ್ಕೆ ಏರಿಸಲಾಗಿದೆ. ಕಾಶ್ಮೀರದ 46 ಸ್ಥಾನಗಳನ್ನು 47ಕ್ಕೆ ಏರಿಸಿದ್ದೇವೆ. ಕ್ಷೇತ್ರ ಪುನರ್ ವಿಂಗಡಣೆಗಾಗಿ ಕೇಂದ್ರ ಸರ್ಕಾರ ಆಗೋಗವನ್ನೂ ರಚಿಸಿದೆ ಎಂದು ತಿಳಿಸಿದರು.

ಹೊಸ ಮಸೂದೆಯಲ್ಲಿ, ಪಿಒಕೆಗೆ ಸ್ಥಳಾಂತರಗೊಂಡವರಿಗೆ ಒಂದು ಅಸೆಂಬ್ಲಿ ಸ್ಥಾನವನ್ನು ಮತ್ತು ಕಾಶ್ಮೀರದಿಂದ ಹೊರಗೆ ನೆಲೆಸಿರುವವರಿಗೆ ಎರಡು ಸ್ಥಾನಗಳನ್ನು ಮೀಸಲಿಡಲಾಗಿದೆ. ಕಾಯ್ದಿರಿಸಿದ ಸ್ಥಾನಕ್ಕೆ ಪಿಒಕೆಯಿಂದ ಒಬ್ಬ ಪ್ರತಿನಿಧಿಯನ್ನು ನಾಮನಿರ್ದೇಶನ ಮಾಡಲಾಗುತ್ತದೆ. ಇದು ವಿಧಾನಸಭೆಯಲ್ಲಿ ನಾಮನಿರ್ದೇಶಿತ ಸ್ಥಾನಗಳನ್ನು ಹಿಂದಿನ ಮೂರರಿಂದ ಐದಕ್ಕೆ ಹೆಚ್ಚಿಸಿದೆ ಎಂದು ಹೇಳಿದರು.

31,000 ಕುಟುಂಬ ಜಮ್ಮು-ಕಾಶ್ಮೀರದಲ್ಲಿ ನೆಲೆ

ಭಯೋತ್ಪಾದನೆಯ ಹಾವಳಿಯಿಂದಾಗಿ ಜಮ್ಮು ಮತ್ತು ಕಾಶ್ಮೀರವನ್ನು ತೊರೆಯಬೇಕಾದವರನ್ನು ಈ ಮಸೂದೆಗಳು ಬಲಪಡಿಸುತ್ತವೆ. ಕಾಶ್ಮೀರದಲ್ಲಿ ಭಯೋತ್ಪಾದಕ ಬೆದರಿಕೆಗಳಿಂದಾಗಿ ಈ ಪ್ರದೇಶದಲ್ಲಿ ಒಟ್ಟು 1,57,967 ಜನರು ತಮ್ಮ ಮನೆಗಳಿಂದ ಸ್ಥಳಾಂತರಗೊಂಡು ದೇಶದ ಇತರ ಭಾಗಗಳಲ್ಲಿ ನೆಲೆಸಬೇಕಾಯಿತು. ಪಾಕಿಸ್ತಾನದೊಂದಿಗಿನ ಮೊದಲ ಯುದ್ಧದ ನಂತರ ಪಾಕ್ ಆಕ್ರಮಿತ ಕಾಶ್ಮೀರದಿಂದ 31,000ಕ್ಕೂ ಹೆಚ್ಚು ಕುಟುಂಬಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ನೆಲೆಸಿದವು ಎಂದು ತಿಳಿಸಿದರು.

RELATED ARTICLES

Related Articles

TRENDING ARTICLES