ಬೆಂಗಳೂರು: ರೌದ್ರ ರೂಪ ತಾಳಿದ ಮೈಚಾಂಗ್ ಚಂಡ ಮಾರುತಕ್ಕೆ ತಮಿಳುನಾಡು, ಆಂಧ್ರ ಪ್ರದೇಶದಲ್ಲಿ ಜನ ಜೀವನ ಅಸ್ತವ್ಯಸ್ಥಗೊಂಡಿದೆ. ಈ ಬೆನ್ನಲ್ಲೇ ಮುಂದಿನ 24 ಗಂಟೆಗಳಲ್ಲಿ ರಾಜ್ಯದ ಕೆಲ ಭಾಗಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಮೈಚಾಂಗ್ ಚಂಡಮಾರುತದ ಎಫೆಕ್ಟ್‌ನಿಂದ ರಾಜ್ಯದಲ್ಲೂ ಮೋಡ ಕವಿವ ವಾತಾವರಣ ಇದೆ. ಅಲ್ಲಲ್ಲಿ ಮಳೆ ಹನಿಗಳು ಬೀಳುತ್ತಿದ್ದು, ಚಳಿಯ ವಾತಾವರಣ ಸೃಷ್ಟಿಸಿದೆ. ಮುಂದಿನ 24 ಗಂಟೆಗಳಲ್ಲಿ ರಾಜ್ಯದ ಕೆಲ ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರಿನ ಕೆಲವೆಡೆ ಸಾಧಾರಣ ಮಳೆಯಾಗಲಿದೆ. ನಗರದಲ್ಲಿಂದು ಗರಿಷ್ಠ 27 ಡಿಗ್ರಿ ಸೆಲ್ಸಿಯಸ್, ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ.
ಇದನ್ನೂ ಓದಿ: ವಂಚನೆ ಪ್ರಕರಣ: ಕುಂದಾಪುರದ ಚೈತ್ರಾಗೆ ಜಾಮೀನು ಮಂಜೂರು! ಇಂದು ಬಿಡುಗಡೆ
ಮುಂದಿನ 24 ಗಂಟೆಗಳ ನಂತರ ಈ ತಾಪಮಾನ ಬದಲಾಗಲಿದ್ದು, ಗರಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್‌ಗೆ ಬರುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.