Friday, November 22, 2024

ಲೀಲಾವತಿ ಆಸ್ಪತ್ರೆ ಖರ್ಚು ನಾನು ನೋಡಿಕೊಳ್ಳುತ್ತೇನೆ : ಸಿದ್ದರಾಮಯ್ಯ ಘೋಷಣೆ

ಬೆಂಗಳೂರು : ನೆಲಮಂಗಲದಲ್ಲಿ ಕಾರ್ಯಕ್ರಮ ಇತ್ತು ಬಂದಿದ್ದೆ. ಹಾಗೆಯೇ ಹಿರಿಯ ನಟಿ ಲೀಲಾವತಿ ಅವರ ಆರೋಗ್ಯ ವಿಚಾರಿಸಲು ಬಂದೆ. ಅವರಿಗೆ ವಯಸ್ಸಾಗಿದೆ, ಬೆಡ್ ರಿಡಾನ್ ಆಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಟಿ ಲೀಲಾವತಿ ಆರೋಗ್ಯ ವಿಚಾರಿಸಿದ ಬಳಿ ಮಾತನಾಡಿದ ಅವರು, ಲೀಲಾವತಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ರೆ ಎಲ್ಲಾ ಖರ್ಚು ನಾನು ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ಲೀಲಾವತಿ ಅವರು ಒಳ್ಳೆಯ ಕಲಾವಿದೆ. ಅವರಲ್ಲಿ ನೈಜ ಪ್ರತಿಭೆಯಿತ್ತು, ನೈಜ ಕಲಾವಿದೆ. ರಾಜ್ಯ ಸರ್ಕಾರದಿಂದ ಸಹಾಯ ಬೇಕಿದ್ರೆ ಕೊಡ್ತಿವಿ. ಸರ್ಕಾರ ಈ ಬಗ್ಗೆ ಸದಾ ಸಿದ್ದವಿದೆ. ಅಮ್ಮನನ್ನು ಕೊನೆವರೆಗೂ ಚೆನ್ನಾಗಿ ನೋಡಿಕೊಳ್ಳಿ. ಅರಣ್ಯ ಇಲಖೆಯವರು ತೊಂದ್ರೆ ಕೊಡ್ತಾರೆ ಎಂದು ಭಾಗದವ್ರು ಅಂತಿದ್ರು. ಈ ಬಗ್ಗೆ ಮಾಹಿತಿ ಪಡೆಯುತ್ತೇನೆ ಎಂದು ತಿಳಿಸಿದರು.

ಪ್ರೀತಿಯಿಂದ ತಾಯಿಯ ಆರೋಗ್ಯ ವಿಚಾರಿಸಿದ್ರು

ಸಿಎಂ ಸಿದ್ದರಾಮಯ್ಯನವರು ಪ್ರೀತಿಯಿಂದ ತಾಯಿಯ ಆರೋಗ್ಯ ವಿಚಾರಿಸಿದ್ದಾರೆ. ಈ ರೀತಿಯ ನೋವು ದೇವರು ಕೊಡಬಾರದು. ಒಂಟಿಯಾಗಿಬಿಟ್ಟೆ ಎಂದು ಕಣ್ಣೀರು ಹಾಕಿದ ವಿನೋದ್ ರಾಜ್, ಬಡವರನ್ನ ಕಣ್ಣೀರು ಹಾಕಿಸಬೇಡಿ ಎಂದು ತಾಯಿ ಹೇಳ್ತಿದ್ರು. ಅವರು ಚೆನ್ನಾಗಿದ್ರೆ ದೇಶ ಸುಭೀಕ್ಷ ಎಂದು ಭಾವುಕರಾದರು.

ರೈತರನ್ನು ಒಕ್ಕಲೆಬ್ಬಿಸೋದು ಆಗಬಾರದು

ನಟ ವಿನೋದ್ ರಾಜ್ ಮಾತನಾಡಿ, ಕಲಾವಿದರನ್ನ ಕಾಯಿಸಬೇಡ ಎಂದು ಡಿಎಫ್​ಓಗೆ ಸಿಎಂ ಹೇಳಿದ್ರು. ಕಂದಾಯ ಭೂಮಿ ಎಂದು ಸೆಟಲ್ಮೆಂಟ್ ಆಗಿತ್ತು. ಆಗಿನ ಕಂದಾಯ ಸಚಿವರು ಶ್ರೀನಿವಾಸ್ ಪ್ರಸಾದ್ ಕರೆದು ಮಾತನಾಡಿದ್ರು. ರೈತರನ್ನು ಒಕ್ಕಲೆಬ್ಬಿಸೋದು ಆಗಬಾರದು. ರೈತರು ಅಲೆದೋಡಿಸೋದು ಆಗಬಾರದು. ರೈತರು ಭೂ ಕಬಳಿಕೆ ಮಾಡ್ತಿದ್ದಾರೆ. ರಾಗಿ ಬೆಳೆಯುತ್ತಿದ್ದಾರೆ. ಅವ್ರನ್ನ ಕಳಿಸಿಬಿಟ್ರೆ? ಈ ಬಗ್ಗೆ ಸಿಎಂ ಅವ್ರ ಗಮನಕ್ಕೆ ತಂದಿದ್ದೇವೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES