ಬೆಂಗಳೂರು: ನವೆಂಬರ್ ಮುಗಿಯಿತು ವರ್ಷದ ಕೊನೆಯ ತಿಂಗಳು ಡಿಸೆಂಬರ್‌ನಲ್ಲಿ ಯಾವೆಲ್ಲಾ ದಿನಗಳು ಬರುತ್ತವೆ ಎಂದು ಶಾಲೆ,ಕಾಲೇಜು, ಆಫೀಸಿಗೆ ಹೋಗುವವರು ವೀಕ್ಲಿ ಆಫ್ ಹೊರತುಪಡಿಸಿ ಬೇರೆ ದಿನ ಕೂಡಾ ರಜೆ ದೊರೆಯಲಿ ಎಂದು ಕಾಯುತ್ತಿರುತ್ತಾರೆ. ಇನ್ನು ಡಿಸೆಂಬರ್‌ನಲ್ಲಿ ಕೂಡಾ ಕೆಲವೊಂದು ಸರ್ಕಾರಿ ರಜೆ ಹಾಗೂ ಪ್ರಮುಖ ಆಚರಣೆಗಳು ಇವೆ. ಯಾವೆಲ್ಲಾ ಪ್ರಮುಖ ದಿನಗಳಿವೆ ಇಲ್ಲಿಂದೆ ಕಂಪ್ಲೀಟ್ ಡಿಟೇಲ್ಸ್
ವಿಶ್ವ ಏಡ್ಸ್ ದಿನ
ಪ್ರತಿ ವರ್ಷ ಡಿಸೆಂಬರ್ 1ರಂದು ವಿಶ್ವ ಏಡ್ಸ್ ದಿನವನ್ನು ಆಚರಿಸಲಾಗುತ್ತಿದೆ. ಹೆಚ್‌ಐವಿಗೆ ಒಳಗಾಗಿರುವರಿಗೆ ಧೈರ್ಯ ತುಂಬಲು,ಏಡ್ಸ್ ಬಾರದಂತೆ ಅರಿವು ಮೂಡಿಸುವುದು ಈ ಏಡ್ಸ್ ದಿನದ ಮಹತ್ವವಾಗಿದೆ.
ವಿಶ್ವ ಗುಲಾಮಗಿರಿ ನಿರ್ಮೂಲನಾ ದಿನವಿಶ್ವದ ಅನೇಕ ಕಡೆ ಗುಲಾಮಗಿರಿ ಎಗ್ಗಿಲ್ಲದೆ ಸಾಗುತ್ತಿದೆ. ಮಾನವ ಕಳ್ಳಸಾಗಣಿ, ಗುಲಾಮಗಿರಿ ನಿರ್ಮೂಲನೆ ವಿರುದ್ದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿಶ್ವ ಗುಲಾಮಗಿರಿ ನಿರ್ಮೂಲನಾ ದಿನವನ್ನು ಆಚರಿಸಲಾಗುತ್ತಿದೆ.
ವಿಶ್ವ ವಿಶೇಷಚೇತನರ ದಿನ
ವಿಷೇಷಚೇತನರ ಹಕ್ಕುಗಳು ಸಬಲೀಕರಣದ ಉದ್ದೇಶದಿಂದ ಡಿಸೆಂಬರ್ 3 ರಂದು ವಿಶ್ವ ವಿಶೇಷ ಚೇತನರ ದಿನವನ್ನು ಆಚರಿಸಲಾಗುತ್ತದೆ.
ಭಾರತೀಯ ನೌಕಾಪಡೆಯ ದಿನ
ಪ್ರತಿ ವರ್ಷ ಡಿಸೆಂಬರ್ 4 ರಂದು ಭಾರತೀಯ ನೌಕಾಪಡೆಯ ದಿನವನ್ನು ಆಚರಿಸಲಾಗುತ್ತಿದೆ. ಭಾರತೀಯ ನೌಕಾಪಡೆಯ ಶೌರ್ಯ, ಸಮರ್ಪಣೆ ಮತ್ತು ತ್ಯಾಗವನ್ನು ಈ ದಿನ ಗೌರವಿಸಲಾಗುತ್ತದೆ. ಪ್ರತಿ ವರ್ಷವೂ ಒಂದೊಂದು ಥೀಮ್‌ನಡಿ ಈ ದಿನವನ್ನು ಆಚರಿಸಲಾಗುತ್ತದೆ.
ಅಂತಾರಾಷ್ಟ್ರೀಯ ಸ್ವಯಂಸೇವಕ ದಿನ
ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಅಂತರಾಷ್ಟ್ರೀಯ ಸ್ವಯಂಸೇವಕರ ದಿನದ ಮೂಲಕ ಸ್ವಯಂ ಸೇವಕರ ಅಮೂಲ್ಯ ಕೊಡುಗೆಗಳನ್ನು ಜಗತ್ತು ಗುರುತಿಸುತ್ತದೆ.
ವಿಶ್ವ ಮಣ್ಣಿನ ದಿನ
ಮಣ್ಣಿನ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಡಿಸೆಂಬರ್ 05 ರಂದು ವಿಶ್ವ ಮಣ್ಣಿನ ದಿನವನ್ನು ಆಚರಿಸಲಾಗುತ್ತದೆ. ಪ್ರತಿ ವರ್ಷ ಬೇರೆ ಬೇರೆ ಥೀಮ್‌ನೋಂದಿಗೆ ವಿಶ್ವ ಮಣ್ಣಿನ ದಿನವನ್ನು ಆಚರಣೆ ಮಾಡಲಾಗುತ್ತದೆ.
ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ದಿನ
ವಿಶ್ವದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ನಾಗರಿಕ ವಿಮಾನಯಾನದ ಪ್ರಾಮುಖ್ಯತೆ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಡಿಸೆಂಬರ್ 7 ರಂದು ಅಂತಾರಾಷ್ಟ್ರೀಯ ನಾಗರಿಕ ವಿಮಾನ ಯಾನ ದಿನವನ್ನು ಆಚರಿಸಲಾಗುತ್ತದೆ.
ಮಾನವ ಹಕ್ಕುಗಳ ದಿನ
ಮತ್ತೊಬ್ಬರ ಬದುಕಿನ ಹಕ್ಕನ್ನು ಕಸಿಯುವುದು, ಅವರಿಗೆ ಹಿಂಸೆ ನೀಡುವುದು ಮಾನವ ಹಕ್ಕುಗಳ ವ್ಯಾಪ್ತಿಯಲ್ಲಿ ಬರುತ್ತದೆ. ಆದರೆ ಈ ಮೂಲಭೂತ ಹಕ್ಕುಗಳನ್ನು ಧಮನಿಸುವ ಪ್ರಯತ್ನವೇ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಪ್ರತಿಯೊಬ್ಬರಿಗೂ ಕನಿಷ್ಠ ಅಗತ್ಯತೆಗಳು ಸಿಗಬೇಕು, ಅವರ ಹಕ್ಕುಗಳಿಗೆ ಗೌರವ ಸಿಗಬೇಕು ಎಂಬ ಉದ್ದೇಶದಿಂದ ಪ್ರತಿವರ್ಷ ಡಿಸೆಂಬರ್ 10 ರಂದು ವಿಶ್ವ ಮಾನವ ಹಕ್ಕುಗಳ ದಿನವನ್ನು ಆಚರಿಸಲಾಗುತ್ತಿದೆ.
ಭ್ರಷ್ಟಾಚಾರ ವಿರುದ್ಧದ ಅಂತಾರಾಷ್ಟ್ರೀಯ ದಿನ
ಡಿಸೆಂಬರ್ 9 ರಂದು, ಭ್ರಷ್ಟಾಚಾರದ ವಿರುದ್ಧ ಅಂತಾರಾಷ್ಟ್ರೀಯ ದಿನವನ್ನು ಆಚರಿಸಲಾಗುತ್ತದೆ. ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವಲ್ಲಿ ಮತ್ತು ನ್ಯಾಯಯುತ ಮತ್ತು ಸಮಾನ ಜಗತ್ತನ್ನು ಉತ್ತೇಜಿಸುವಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಉತ್ತಮ ಆಡಳಿತದ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತದೆ.
ಅಂತಾರಾಷ್ಟ್ರೀಯ ವಲಸಿಗರ ದಿನ
ವಿಶ್ವಾದ್ಯಂತ ವಲಸಿಗರ ಅಭಿವೃದ್ಧಿ, ಅವರ ಕುಟುಂಬದ ರಕ್ಷಣೆ, ಸೌಕರ್ಯಗಳನ್ನು ದೊರಕಿಸಿಕೊಡಲು ಅಂತಾರಾಷ್ಟ್ರೀಯ ವಲಸಿಗರ ದಿನವನ್ನು ಮೊದಲ ಬಾರಿಗೆ 1900 ಡಿಸೆಂಬರ್‌ನಲ್ಲಿ ಆಚರಿಸಲಾಯಿತು.
ಗೋವಾ ವಿಮೋಚನಾ ದಿನ
ಡಿಸೆಂಬರ್ 19 ರಂದು, ಭಾರತವು ಗೋವಾ ವಿಮೋಚನಾ ದಿನವನ್ನು ಆಚರಿಸುತ್ತದೆ. ಪೋರ್ಚುಗೀಸರ ಆಳ್ವಿಕೆಯಿಂದ ಗೋವಾ 1961 ರಲ್ಲಿ ವಿಮೋಚನೆ ಪಡೆದ ದಿನವನ್ನು ಸ್ಮರಿಸುವ ಉದ್ದೇಶದಿಂದ ಪ್ರತಿ ವರ್ಷ ಈ ದಿನವನ್ನು ಆಚರಿಸಲಾಗುತ್ತದೆ.
ಕ್ರಿಸ್‌ಮಸ್
ಡಿಸೆಂಬರ್ 25ರಂದು ಇಡೀ ವಿಶ್ವವೇ ಕ್ರಿಸ್‌ಮಸ್ ಆಚರಿಸುತ್ತದೆ. ಜೀಸಸ್‌ನ ಜನ್ಮದಿನವನ್ನು ಕ್ರಿಸ್‌ಮಸ್ ಆಗಿ ಆಚರಿಸಲಾಗುತ್ತದೆ. ವಿಶ್ವಾದ್ಯಂತ ಇರುವ ಕ್ಯಾಥೋಲಿಕ್ ಹಾಗೂ ಪ್ರೊಟಸ್ಟಂಟ್ ಎರಡೂ ಪಂಗಡದ ಕ್ರೈಸ್ತ ಧರ್ಮೀಯರು ಈಗಾಗಲೇ ಕ್ರಿಸ್‌ಮಸ್ ತಯಾರಿಯಲ್ಲಿ ತೊಡಗಿದ್ದಾರೆ.
ಹೊಸ ವರ್ಷದ ಈವ್
ಪ್ರತಿ ವರ್ಷವೂ ಹೊಸ ವರ್ಷದ ಹಿಂದಿನ ದಿನ ಕ್ರಿಸ್‌ಮಸ್ ಈವ್ ಆಚರಿಸಲಾಗುತ್ತದೆ. ಇದು ಇಂಗ್ಲೀಷ್ ಕ್ಯಾಲೆಂಡರ್ ಆಚರಣೆ ಆದರೂ ಹಿಂದೂಗಳು ಕೂಡಾ ಪಾರ್ಟಿ, ಡಿನ್ನರ್, ಮೋಜು ಮಸ್ತಿ ಮೂಲಕ ವರ್ಷದ ಕೊನೆಯ ದಿನವನ್ನು ಆಚರಿಸುತ್ತಾರೆ.