Saturday, November 2, 2024

ಇಂದು ನಿಗಮ ಮಂಡಳಿ ನೇಮಕಾತಿ ಫೈನಲ್ : ಯಾರಿಗೆ ಸಿಗಲಿದೆ ನಿಗಮಾಧ್ಯಕ್ಷ ಸ್ಥಾನ..?

ಬೆಂಗಳೂರು: ನಿಗಮ-ಮಂಡಳಿ ಹುದ್ದೆ ನೇಮಕಾತಿ ಸಂಬಂಧ ಮೊದಲ ಹಂತದ ಪಟ್ಟಿ ಬಹುತೇಕ ಅಂತಿಮಗೊಂಡಿದೆ.ನೇಮಕಾತಿ ಪಟ್ಟಿಯನ್ನು ಫೈನಲ್ ಮಾಡಿ ಅಂತಿಮ ಹಂತದ ಚರ್ಚೆ ಮಾಡಲು          ಕಾಂಗ್ರೆಸ್​ ಉಸ್ತುವಾರಿ ಸಚಿವ ರಣದೀಪ್​ ಸಿಂಗ್ ಸುಜೇವಾಲ ಇಂದು ಬೆಂಗಳೂರಿಗೆ ಆಗಮಿಸುತ್ತಿದ್ಧಾರೆ. 

ಇಂದು ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 8ಗಂಟೆ ವರೆಗೂ ಸಭೆ ನಡೆಯಲಿದ್ದು, ಇದರಲ್ಲಿ ಮಹತ್ವದ ಚರ್ಚೆಗಳು ನಡೆಯಲಿವೆ. ಆದ್ದರಿಂದ ಯಾರಿಗೆ ನಿಗಮ ಮಂಡಳಿ ಭಾಗ್ಯ ದೊರೆಯಲಿದೆ ಎನ್ನುವುದು ಸ್ಪಷ್ಟವಾಗಲಿದೆ. ಹೀಗಾಗಿ ಇಂದಿನ ಸಭೆ ಮಹತ್ವದ ಪಡೆದುಕೊಂಡಿದೆ.

ಇದನ್ನೂ ಓದಿ: ಹಾಸ್ಟೆಲ್‌ನಲ್ಲಿ ಚಿತ್ರಾನ್ನ ತಿಂದ 23 ವಿದ್ಯಾರ್ಥಿಗಳು ಅಸ್ವಸ್ಥ

25 ಮಂದಿ ಸಂಭಾವ್ಯರ ಪಟ್ಟಿ ಈಗಾಗಲೇ ಸಿದ್ಧ

ಇದರಲ್ಲಿ ಕೆಲವರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದು ನಿಗಮ-ಮಂಡಳಿ ಹುದ್ದೆ ಬೇಡ ಎನ್ನುವ ಮಾತುಗಳನ್ನಾಡುತ್ತಿದ್ದಾರೆ. ಒಂದು ವೇಳೆ ಪಟ್ಟಿ ಬಿಡುಗಡೆ ಬಳಿಕ ಆಕ್ಷೇಪ ವ್ಯಕ್ತಪಡಿಸಿದರೆ ಅಥವಾ ನೇಮಕವನ್ನು ಅಲ್ಲಗಳೆದರೆ ಪಕ್ಷಕ್ಕೆ ಮುಜುಗರವಾಗುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಇವರೆಲ್ಲರ ಅಭಿಪ್ರಾಯವನ್ನು ಸಂಗ್ರಹಿಸಿದ್ದು, ಅದನ್ನು ಮುಂದಿಟ್ಟುಕೊಂಡು ಇಂದು ಸಭೆ ನಡೆಯಲಿದೆ. ಬಳಿಕವಷ್ಟೇ ನೇಮಕಾತಿ ಪಟ್ಟಿ ಅಂತಿಮಗೊಳ್ಳಲಿದೆ ಎಂದು ತಿಳಿದುಬಂದಿದೆ.

ಇನ್ನು ಮೊದಲ ಹಂತದ ಪಟ್ಟಿಯಲ್ಲಿರುವ 25 ಮಂದಿಯೂ ಶಾಸಕರು ಹಾಗೂ ವಿಧಾನಪರಿಷತ್‌ ಸದಸ್ಯರೇ ಆಗಿದ್ದಾರೆ. ಇನ್ನು ಲೋಕಸಭೆ ಚುನಾವಣೆ ದೃಷ್ಟಿಯಿಂದ 15 ಕಾರ್ಯಕರ್ತರ ಪಟ್ಟಿಯನ್ನೂ ಅಂತಿಮಗೊಳಿಸುವ ಬಗ್ಗೆಯೂ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.

ಸಂಭಾವ್ಯರ ಪಟ್ಟಿ ಹೀಗಿದೆ

ಪಿ.ಎಂ ನರೇಂದ್ರ ಸ್ವಾಮಿ, ರಮೇಶ್ ಬಾಬು ಬಂಡಿಸಿದ್ದೇಗೌಡ, ಅನಿಲ್ ಚಿಕ್ಕಮಾದು, ಟಿ.ಡಿ ರಾಜೇಗೌಡ, ಶಿವಲಿಂಗೇಗೌಡ, ಬಿ.ಕೆ ಸಂಗಮೇಶ್, ಬಂಗಾರಪೇಟೆ ನಾರಾಯಣಸ್ವಾಮಿ, ಕೆ.ವೈ ನಂಜೇಗೌಡ, ಬಿ.ಆರ್ ಪಾಟೀಲ್, ಗಣೇಶ್ ಹುಕ್ಕೇರಿ, ಮಹಾಂತೇಶ್ ಕೌಜಲಗಿ, ಯಶವಂತ್ ರಾಯ್ ಗೌಡ ಪಾಟೀಲ್, ಬಿ.ಜಿ ಗೋವಿಂದಪ್ಪ. ರಾಘವೇಂದ್ರ ಹಿಟ್ನಾಳ್, ರಘುಮೂರ್ತಿ, ಭೀಮಣ್ಣ ನಾಯ್ಕ್, ಸತೀಶ್ ಸೈಲ್, ಪ್ರಸಾದ್ ಅಬ್ಬಯ್ಯ, ಜಿ.ಟಿ ಪಾಟೀಲ್ , ಡಿ.ಆರ್ ಪಾಟೀಲ್, ಬಸನಗೌಡ ತುರುವಿಹಾಳ್

ಹಾಗಾದ್ರೆ, ಯಾರಿಗೆ ನಿಗಮ ಮಂಡಳಿ ಭಾಗ್ಯ ಒಲಿದು ಬರಲಿದೆ ಎಂಬುವುದನ್ನೂ ಕಾದು ನೋಡಬೇಕಿದೆ.

 

 

 

RELATED ARTICLES

Related Articles

TRENDING ARTICLES