ಬೆಂಗಳೂರು : ನಿನ್ನೆ ಸಂಜೆ ಕಾಶ್ಮೀರದ ರಜೋರಿಯಲ್ಲಿ ಭಯೋತ್ಪಾದಕರ ಗುಂಡಿಗೆ ಬಲಿಯಾದ ಕ್ಯಾಪ್ಟನ್ ಎಂ.ವಿ ಪ್ರಾಂಜಲ್ ಅವರ ಅಂತಿಮ ದರ್ಶನಕ್ಕೆ ಜಿಗಣಿ ನಂದನವನ ಬಡಾವಣೆ ಮನೆಯ ಸಮೀಪ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಮನೆಯ ಮುಂಭಾಗ ಸ್ವಚ್ಛತಾ ಕಾರ್ಯವೂ ನಡೆಯುತ್ತಿದೆ. ಕಳೆದ ಒಂಬತ್ತು ವರ್ಷಗಳಿಂದ ಪ್ರಾಂಜಲ್ ಪೋಷಕರು ಇಲ್ಲಿ ವಾಸವಿದ್ದಾರೆ. ದಸರಾ ಹಬ್ಬಕ್ಕೆ ಬಂದಿದ್ದ ಪ್ರಾಂಜಲ್, ಒಂದು ವಾರವಿದ್ದು ಬಳಿಕ ಕರ್ತವ್ಯಕ್ಕೆ ತೆರಳಿದ್ದರು.
ಮೂಲತಃ ಮೈಸೂರಿನವರಾದ ಪ್ರಾಂಜಲ್ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ನ ಮಾಜಿ ನಿರ್ದೇಶಕ ಎಂ.ವೆಂಕಟೇಶ್ ಅವರ ಒಬ್ಬನೇ ಮಗನಾಗಿದ್ದರು. ಸುರತ್ಕಲ್ ನ ಹಿರಿಯ ರಾಷ್ಟ್ರಪತಿ ಸ್ಕೌಟ್ ವಿದ್ಯಾರ್ಥಿಯೂ ಆಗಿದ್ದ ಪ್ರಾಂಜಲ್ ಬೆಂಗಳೂರಿನ ಅದಿತಿ ಎಂಬವರ ಜೊತೆ ವಿವಾಹವಾಗಿತ್ತು. ನಂತರ ಎರೆಡು ವರ್ಷಗಳ ಬಳಿಕವಷ್ಟೇ ಕಾಶ್ಮೀರಕ್ಕೆ ತರಳಿದ್ದು, ಅದಿತಿ ಚೆನ್ನೈ ನಲ್ಲಿ ವಿದ್ಯಾಭ್ಯಾಸ ತೊಡಗಿದ್ದರು.
ಕೂಡ್ಲು ಚಿತಾಗಾರದಲ್ಲಿ ಅಂತಿಮ ಸಂಸ್ಕಾರ
ಈಗ ವಿಷಯ ತಿಳಿಯುತ್ತಿದ್ದಂತೆ ಜಿಗಣಿ ಸಮೀಪದ ಬುಕ್ಕಸಾಗರ ನಿವಾಸಕ್ಕೆ ಆಗಮಿಸಿದ್ದಾರೆ. ಭಯೋತ್ಪಾದಕರ ವಿರುದ್ಧದ ದಾಳಿಯಲ್ಲಿ ಇಬ್ಬರು ಅಧಿಕಾರಿಗಳ ಜೊತೆ ನಾಲ್ವರು ಸೇನಾ ಯೋಧರು ಹುತಾತ್ಮರಾಗಿದ್ದಾರೆ. ಅವರಲ್ಲಿ 63 ರಾಷ್ಟ್ರೀಯ ರೈಫಲ್ಸ್‌ನ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ ಒಬ್ಬರು. ನೋವಿನಲ್ಲಿ ತಂದೆ ವೆಂಕಟೇಶ್ ಮತ್ತು ತಾಯಿ ಅನುರಾಧ ಮತ್ತು ಸಂಬಂಧಿಕರಿದ್ದಾರೆ. ಬೆಂಗಳೂರು ಹೊಸೂರು ಹೆದ್ದಾರಿಯ ಕೂಡ್ಲು ವಿದ್ಯುತ್ ಚಿತಾಗಾರದಲ್ಲಿ ಅಂತಿಮ ಯಾತ್ರೆ ಮುಗಿಯಲಿದೆ ಎಂದು ತಿಳಿಸಿದ್ದಾರೆ.