Sunday, November 24, 2024

ಬೆಂಗಳೂರಿನಲ್ಲಿ ಕಂಬಳದ ರಿಹರ್ಸಲ್ ಭರಾಟೆ : ನ.25ರಂದು ಸಿಎಂ ಭಾಗಿ

ಬೆಂಗಳೂರು : ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಸಿಲಿಕಾನ್ ಸಿಟಿ ಬೆಂಗಳೂರಿನ ಅರಮನೆ ಆವರಣದಲ್ಲಿ ನವೆಂಬರ್ 25 ಹಾಗೂ 26ರಂದು ಕಂಬಳ ನಡೆಯಲಿದ್ದು, ಕಂಬಳದ ರಿಹರ್ಸಲ್ ಆರಂಭವಾಗಿದೆ.

ಬೆಂಗಳೂರು ಕಂಬಳ ಸಮಿತಿ ಕೋಣಗಳಿಗೆ ಪೂಜೆ ಮಾಡಿ ಕೆಸರಿಗೆ ಇಳಿಸಿದೆ. ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್​​ನಲ್ಲಿ ರಿಹರ್ಸಲ್ ನಡೆಯುತ್ತಿದೆ. 2 ಜೊತೆ ಕೋಣಗಳು ಕಂಬಳ ಕುದಿಗೆ ಸಿದ್ದಗೊಂಡಿವೆ. ಪುತ್ತೂರು ಬಾಲಯ ತಿಂಗಳಾಡಿಯ ಎರಡು ಜೊತೆ ಕೋಣಗಳಿಂದ ಟ್ರಯಲ್ ರನ್ ನಡೆಯುತ್ತಿದೆ.

ಇವತ್ತು ಕಂಬಳ ಓಡಿಸುವ ಟ್ರಯಲ್ ಮುಗಿದಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇವತ್ತು ಕಂಬಳ ಓಡಿಸುವ ಟ್ರಯಲ್ ಮುಗಿದಿದೆ. ಕೆರೆಯ ಬಗ್ಗೆ ರಿಪೋರ್ಟ್ ಕೊಡ್ತಾರೆ. ಈಗಾಗಲೇ ಅವರು ಹೇಳಿದ್ದಾರೆ, ಒನ್ ಆಪ್ ದಿ ಬೆಸ್ಟ್ ಕೆರೆ ಎಂದು. ಇವತ್ತು ಎಲ್ಲಾ ಕೋಣಗಳು ಬರುತ್ತವೆ. ಇನ್ನು ಒಂದು ದಿನ ಬಾಕಿ ಇದೆ. ಎಲ್ಲಾ ಸಿದ್ದತೆ ಮಾಡ್ತೇವೆ. ಫ್ರೀಯಾಗಿ ಎಲ್ಲರೂ ಬಂದು ಕಂಬಳ ವೀಕ್ಷಣೆ ಮಾಡಬಹುದು ಎಂದು ತಿಳಿಸಿದ್ದಾರೆ.

ಸಿಎಂ 25ರಂದು ಕಂಬಳಕ್ಕೆ ಬರ್ತಾರೆ

ನಾಡಿದ್ದು ಕಂಬಳ ಆರಂಭವಾಗುತ್ತೆ. ನಾಳೆ ತುಳುಕೂಟದ ಕಾರ್ಯಕ್ರಮ ಇದೆ. ಸಿಎಂ ಸಿದ್ದರಾಮಯ್ಯ 25ರಂದು ಕಂಬಳಕ್ಕೆ ಬರ್ತಾರೆ. VIPಗಳಿಗೆ ಪ್ರತ್ಯೇಕ ಗೇಟ್ ಮತ್ತು ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದೇವೆ. ಜನದಟ್ಟಣೆ ಕಂಟ್ರೋಲ್ ಮಾಡಲು ಪೊಲೀಸರೊಂದಿಗೆ ನಮ್ಮ 400 ಜನ ಕೆಲಸ ಮಾಡ್ತಾರೆ ಎಂದು ಅವರು ಹೇಳಿದ್ದಾರೆ.

RELATED ARTICLES

Related Articles

TRENDING ARTICLES