Saturday, November 23, 2024

ದೃಶ್ಯಂ ಸಿನಿಮಾ ರೀತಿ ಮಗಳ ಪ್ರಿಯಕರನನ್ನು ಕೊಂದ ತಂದೆ!

ಬೆಂಗಳೂರು: ನಗರದ ಅಶೋಕನಗರ ವ್ಯಾಪ್ತಿಯ ಸುಬ್ಬಣ್ಣ ಗಾರ್ಡನ್​ ಬಳಿ ಮಗಳ ಪ್ರಿಯಕರನನ್ನು ತಂದೆಯೇ ಕೊಂದು ಹಾಕಿರುವ ಘಟನೆ ನಡೆದಿದೆ.

ಡೇವಿಡ್​ ಕೊಲೆಯಾದ ಯುವಕ. ಯವತಿ ತಂದೆ ಮಂಜುನಾಥ್ ಎಂಬಾತನಿಂದ ಕೃತ್ಯ.
ಆಟೋ ಡ್ರೈವರ್ ಆಗಿದ್ದ ಡೇವಿಡ್, ಮಂಜುನಾಥ್​ ಎಂಬಾತನ ಮಗಳನ್ನ ಪ್ರೀತಿಸ್ತಿದ್ದ. ಮದುವೆ ಮಾಡಿಕೊಡುವಂತೆ ಪದೇಪದೆ ಪೀಡಿಸುತ್ತಿದ್ದ. ಮದುವೆಗೆ ನಿರಾಕರಿಸಿದರೆ ನಿಮ್ಮ ಮಗಳೊಂದಿಗಿನ ಫೋಟೋಗಳನ್ನ ವೈರಲ್​​ ಮಾಡೋದಾಗಿ ಬೆದರಿಕೆ ಹಾಕಿದ್ದಾನೆ.

ಇದನ್ನೂ ಓದಿ: ಪ್ರೇಯಸಿಗಾಗಿ ಕಳ್ಳತನ ಮಾಡ್ತಿದ್ದ ಆರೋಪಿ ಗೋವಾದಲ್ಲಿ ಅರೆಸ್ಟ್​!

ಫೋಟೋ ಮತ್ತು ವಿಡಿಯೋ ಇದೆ ಅಂತ ಹೆದರಿಸ್ತಿದ್ದ. ಇದರಿಂದ ಮಗಳ ಮರ್ಯಾದೆ ಹಾಳಾಗುತ್ತೆ ಎಂಬ ನಿರ್ಧಾರಕ್ಕೆ ಬಂದ ತಂದೆ ಮಾತನಾಡುವ ನೆಪದಲ್ಲಿ ಡೇವಿಡ್​​ನನ್ನು ಕರೆದು ರಾಡ್​ನಿಂದ ಹೊಡೆದು, ಚಾಕುವಿನಿಂದ ಇರಿದಿದ್ದಾನೆ. ನಂತರ ಹಾಲೋಬ್ರಿಕ್ಸ್ ಕಲ್ಲುಎತ್ತಿಹಾಕಿ ಕೊಲೆ ಮಾಡಿದ್ದಾನೆ. ಸದ್ಯ ಆರೋಪಿ ಮಂಜುನಾಥ್​​ನನ್ನು ಅಶೋಕ ನಗರ ಪೊಲೀಸರು ವಶಕ್ಕೆ ಪಡೆಡಿದ್ದಾರೆ.

RELATED ARTICLES

Related Articles

TRENDING ARTICLES