Friday, November 22, 2024

ಮಾರ್ಷಲ್ ಹೆಸರಿನಲ್ಲಿ ಕೋಟಿ ಕೋಟಿ ಲೂಟಿ : ಸೇವೆ ಸ್ಥಗಿತಗೊಳಿಸಲು ಡಿ.ಕೆ. ಶಿವಕುಮಾರ್​ಗೆ ಪತ್ರ

ಬೆಂಗಳೂರು : ಮಾರ್ಷಲ್ ಗಳ ಹೆಸರಲ್ಲಿ ಕೋಟಿ ಕೋಟಿ ಹಣ ಲೂಟಿ ಮಾಡುವುದಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. ಈ ಭ್ರಷ್ಟಾಚಾರದ ಬಗ್ಗೆ ಪವರ್ ಟಿವಿ ಪಿನ್ ಟು ಪಿನ್ ದಾಖಲೆ ಸಮೇತವಾಗಿ ಸುದ್ದಿ ಪ್ರಸಾರ ಮಾಡಿತ್ತು.

ಪವರ್ ಸುದ್ದಿ ಪ್ರಸಾರ ಮಾಡುತ್ತಿದ್ದಂತೆಯೇ ಅಧಿಕಾರಿಗಳು ಲೆಕ್ಕ ಪತ್ರಗಳನ್ನ ಉಲ್ಟಾ ಪಲ್ಟಾ ಮಾಡಿ ಕಕ್ಕಾಬಿಕ್ಕಿಯಾಗಿದ್ದರು. ಇದೀಗ ಮಾರ್ಷಲ್ ಗಳ ಸೇವೆಯನ್ನು ಸ್ಥಗಿತಗೊಳಿಸಿ‌ ಎಂದು ಉಪ ಮುಖ್ಯಮಂತ್ರಿ ‌ಡಿ.ಕೆ. ಶಿವಕುಮಾರ್ ಅಂಗಳಕ್ಕೆ ಪತ್ರ ರವಾನೆಯಾಗಿದೆ.

ಬಿಬಿಎಂಪಿ ಭ್ರಷ್ಟಾಚಾರದ ಯೂನಿವರ್ಸಿಟಿ ಎಂದರೂ ತಪ್ಪಾಗಲ್ಲ. ಯಾಕಂದ್ರೆ ಭ್ರಷ್ಟಚಾರ ಯಾವ ರೀತಿ ಮಾಡಬೇಕು ಎನ್ನುವುದು ಪಾಲಿಕೆ ಅಧಿಕಾರಿಗಳಿಂದ ಕಲಿಬೇಕು. ದುಡ್ಡು ಯಾವ ರೀತಿ ಮಾಡಬೇಕು ಎನ್ನುವುದನ್ನು ಇವರನ್ನೇ ನೋಡಿ ಕಲಿಯಬೇಕು. ಏಕೆಂದರೆ ಮಾರ್ಷಲ್‌ಗಳಿಗೆ ಕೊಡುವ ವೇತನದಲ್ಲೂ ಕೋಟಿ ಕೋಟಿ ಲೂಟಿ ಮಾಡಿದ್ದಾರೆ.

750 ಮಾರ್ಷಲ್‌ಗಳು ಕಾರ್ಯ ನಿರ್ವಹಿಸುತ್ತಿಲ್ಲ

ಕಳೆದ ಮೂರು ವರ್ಷಗಳಿಂದ ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 750 ಮಾರ್ಷಲ್‌ಗಳನ್ನ ಗುತ್ತಿಗೆ ಆಧಾರದ ಮೇಲೆ ಕೆಸಲಕ್ಕೆ ತೆಗೆದುಕೊಳ್ಳಲಾಗಿದೆ. ಪ್ರತಿ ತಿಂಗಳು ಒಬ್ಬ ಮಾರ್ಷಲ್‌ಗೆ ಬಿಬಿಎಂಪಿಯಿಂದ 25 ಸಾವಿರ ರೂಪಾಯಿ ವೇತನ ನೀಡಲಾಗ್ತಿದೆ. ಆದ್ರೆ, ಮಾರ್ಷಲ್ ಕೈಗೆ ಸೇರುವುದು ಕೇವಲ 17 ಸಾವಿರ ರೂ. ಎಂದು ಪವರ್ ಟಿವಿ ವರದಿ ಮಾಡಿತ್ತು. ಇದೀಗ 750 ಮಾರ್ಷಲ್‌ಗಳು ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಅನುಮಾನ ಶುರುವಾಗಿದೆ.

ಬರೋಬ್ಬರಿ 15.64 ಕೋಟಿ ರೂ. ಖರ್ಚು

ಪಾಲಿಕೆ ಕೇಂದ್ರ ಕಚೇರಿಗೆ ಎಲ್ಲಾ ಮಾರ್ಷಲ್‌ಗಳನ್ನ ಕರೆಸಿ ಸಾಬೀತು ಪಡಿಸಿ ಎಂದುಬಿಬಿಎಂಪಿ ಮುಖ್ಯ ಆಯುಕ್ತರಿಗೆ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕ ಅಧ್ಯಕ್ಷ ಎನ್.ಆರ್. ರಮೇಶ್ ಪತ್ರ ಬರೆದಿದ್ದಾರೆ. ಇನ್ನೂ, 2017 ರಿಂದ ಈವರೆಗೆ ಮಾರ್ಷಲ್‌ಗಳ ಸೇವೆಗೆಂದು 15.64 ಕೋಟಿ ರೂ. ನಷ್ಟು ಖರ್ಚಾಗಿದೆ. ಹೀಗಾಗಿ, ಪಾಲಿಕೆಯಲ್ಲಿ ಮಾರ್ಷಲ್ ಹೆಸರಿನಲ್ಲಿ ದೊಡ್ಡ ಮಟ್ಟದಲ್ಲಿ ಭ್ರಷ್ಟಾಚಾರದ ವಾಸನೆ ಕಂಡುಬಂದಿದೆ. ಮುಂದಿನ ದಿನಗಳಲ್ಲಿ ಏನಾಗುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

RELATED ARTICLES

Related Articles

TRENDING ARTICLES