ಕುಣಿಗಲ್: ಜನಸೇವೆಯೇ ಜನಾರ್ದನ ಸೇವೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಅದ್ರೆ ಕುಣಿಗಲ್ ಕ್ಷೇತ್ರದ ಶಾಸಕ ರಂಗನಾಥ್ ಒಂದು ಕಡೆ ಜನ ಸೇವೆ ಮತ್ತೊಂದು ಕಡೆ ವೃತ್ತಿ ಧರ್ಮವನ್ನ ಕೂಡಾ ಕಾಪಾಡುತ್ತಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಮತ್ತು ವೈದ್ಯ ರಂಗನಾಥ್, ಇಂದು ಹುತ್ರಿದುರ್ಗ ಹೋಬಳಿಯ ಕಲ್ಲಯ್ಯನಪಾಳ್ಯ ಗ್ರಾಮದ ತಿಮ್ಮಮ್ಮ ಎಂಬ ವಯೋವೃದ್ಧ ಅಜ್ಜಿಯೊಬ್ಬರು ಬಿದ್ದು ಸೊಂಟ ಗಾಯಗೊಂಡ ಪರಿಣಾಮ ಶಸ್ತ್ರಚಿಕಿತ್ಸೆ ಮಾಡಬೇಕೆಂದು ವೈದ್ಯರು ತಿಳಿಸಿದ್ದರು, ತಿಮ್ಮಮ್ಮನ ಕುಟುಂಬ ನನಗೆ ತಿಳಿಸಿದಾಕ್ಷಣವೇ ಬೋರಿಂಗ್ ಆಸ್ಪತ್ರೆಗೆ ಆ ಅಜ್ಜಿಯನ್ನು ಸೇರಿಸಿ ನನ್ನ ವೈದ್ಯ ವೃತ್ತಿಯ ಸ್ನೇಹಿತರೊಡಗೂಡಿ ಇಂದು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿಸಿದೆ.
ಇದನ್ನೂ ಓದಿ: ವಿಶ್ವಕಪ್ ಟ್ರೋಫಿಗೆ ಅವಮಾನ: ಮಾರ್ಷ್ ವಿರುದ್ದ ಕ್ರಿಕೆಟ್ ಪ್ರೇಮಿಗಳು ಗರಂ!
ಶಾಸಕನಾಗಿ ನನ್ನ ಅಭಿವೃದ್ಧಿ ಕೆಲಸಗಳ ನಡುವೆಯೂ ಇಂತಹ ಮಹತ್ಕಾರ್ಯಕ್ಕೆ ನನ್ನನ್ನು ನಾನು ತೊಡಗಿಸಿಕೊಂಡು ಬಡಜನರಿಗೆ ನೆರವಾಗುತ್ತಿರುವುದು ನನಗೆ ವೈಯಕ್ತಿಕವಾಗಿ ಖುಷಿ ತಂದಿದೆ ಎಂದು ಹೇಳುವ ಮೂಲಕ ತಾವು ಮಾಡಿದ ಸೇವೆಯನ್ನ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ.