ಅಹಮದಾಬಾದ್: ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಾಳೆ ನಡೆಯುವ ಟೀಮ್ ಇಂಡಿಯಾ ವರ್ಸಸ್ ಆಸ್ಟ್ರೇಲಿಯಾದ ಫೈನಲ್ ಪಂದ್ಯ ನೋಡಲು ಪ್ರಧಾನಿ ನರೇಂದ್ರ ಮೋದಿ ಹಾಜರಾಗಲಿದ್ದಾರೆ.
ಐಸಿಸಿ ವಿಶ್ವಕಪ್ 2023ರ ಫೈನಲ್ ಪಂದ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಗೃಹ ಸಚಿವ ಅಮಿತ್ ಶಾ ಮತ್ತು ಆಸ್ಟ್ರೇಲಿಯಾದ ಉಪ ಪ್ರಧಾನಿ ರಿಚರ್ಡ್ ಮಾರ್ಲ್ಸ್ ಅನೇಕ ರಾಜಕೀಯ ಗಣ್ಯರು ಸಾಕ್ಷಿಯಾಗಲಿದ್ದಾರೆ ಎಂದು ಅಹಮದಾಬಾದ್ನ ಪೊಲೀಸ್ ಕಮಿಷನರ್ ಜ್ಞಾನೇಂದ್ರ ಸಿಂಗ್ ಮಲಿಕ್ ಅಧಿಕೃತ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಅಶೋಕ್ ವಿಪಕ್ಷ ನಾಯಕನಾದ್ರೆ, ಅದಕ್ಕೆ ನಾನೇನು ಮಾಡಲಿ : ಸಿಎಂ ಸಿದ್ದರಾಮಯ್ಯ
ಆತಿಥೇಯ ಭಾರತ ಮತ್ತು ಸರ್ವಾಧಿಕ 5 ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ಇದು ಇತ್ತಂಡಗಳು ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಬರೋಬ್ಬರಿ 20 ವರ್ಷಗಳ ಬಳಿಕ ಆಗುತ್ತಿರುವ ಮುಖಾಮುಖಿಯಾಗಿದೆ. ಹೀಗಾಗಿ ಪಂದ್ಯದ ಮೇಲೆ ಹಲವು ನಿರೀಕ್ಷೆ ಮತ್ತು ಕುತೂಹಲವಿದೆ.
#WATCH | Ahmedabad, Gujarat: Ahead of the #ICCCricketWorldCup final, Gyanendra Singh Malik, Police Commissioner of Ahmedabad says, "Indian PM (Narendra Modi) will come to watch the Cricket World Cup Final between India and Australia (tomorrow)…" pic.twitter.com/ipEngOmGdP
— ANI (@ANI) November 18, 2023