2020ನೇ ಸಾಲಿನ ಪದ್ಮ ಪ್ರಶಸ್ತಿ ಪ್ರಕಟವಾಗಿದೆ. ಕೃಷ್ಣೈಕ್ಯ ವಿಶ್ವೇಶತೀರ್ಥ ಸ್ವಾಮೀಜಿ ಸೇರಿದಂತೆ ಕರ್ನಾಟಕದ 9 ಮಂದಿ ಸಾಧಕರಿಗೆ ಪದ್ಮಗೌರವ ಸಂದಿದೆ.
ಶ್ರೀ ವಿಶ್ವೇಶತೀರ್ಥರಿಗೆ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ, ಹಿರೇಕಳ ಹಾಜಬ್ಬ, ತುಳಸೀಗೌಡ, ವಿಜಯ ಸಂಕೇಶ್ವರ, ಹಾಕಿ ಆಟಗಾರ ಎಂ.ಪಿ. ಗಣೇಶ್, ವೈದ್ಯರಾದ ಗಂಗಾಧರ, ಭರತ್ ಗೋಯಂಕಾ, ಕೆ.ವಿ. ಸಂಪತ್ ಕುಮಾರ್, ವಿದುಶಿ ಜಯಲಕ್ಷ್ಮಿ ಅವರಿಗೆ ಪದ್ಮಶ್ರೀ ಅವರು ಪದ್ಮಶ್ರೀ ಗೌರವಕ್ಕೆ ಪಾತ್ರರಾಗಿದ್ದಾರೆ.
ಒಟ್ಟು 7 ಮಂದಿಗೆ ಪದ್ಮವಿಭೂಷಣ, 16 ಮಂದಿಗೆ ಪದ್ಮಭೂಷಣ, 118 ಪದ್ಮಶ್ರೀ ಗೌರವ ನೀಡಲಾಗಿದೆ. ವಿಶ್ವೇಶತೀರ್ಥ ಶ್ರೀಗಳಲ್ಲದೆ ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ಜಾರ್ಜ್ ಫರ್ನಾಂಡೀಸ್ ಅವರಿಗೂ ಮರಣೋತ್ತರ ಪದ್ಮ ವಿಭೂಷಣ ಪುರಸ್ಕಾರ ನೀಡಲಾಗಿದೆ.
ವಿಶ್ವೇಶ ತೀರ್ಥ ಶ್ರೀಗಳಿಗೆ ಮರಣೋತ್ತರ ಪದ್ಮ ವಿಭೂಷಣ ; ರಾಜ್ಯದ 8 ಮಂದಿಗೆ ಪದ್ಮಶ್ರೀ
TRENDING ARTICLES