ಹಾಸನ: ವರ್ಷಕ್ಕೊಮ್ಮೆ ಮಾತ್ರ ದರ್ಶನ ಭಾಗ್ಯ ನೀಡುವ ಶ್ರೀ ಹಾಸನಾಂಬ (Hasanamba) ದೇವಿ ನೋಡಲು ಈ ವರ್ಷ ಭಕ್ತ ಸಾಗರವೇ ಹರಿದು ಬಂದಿದೆ.
Hasanamba Temple Income: ಹುಂಡಿ ಹೊರತುಪಡಿಸಿ ದರ್ಶನದ ಟಿಕೆಟ್ & ಲಾಡು ಮಾರಾಟದಿಂದ ಬಂದ ಆದಾಯ ಎಷ್ಟು ಕೋಟಿ ಗೊತ್ತಾ?
ಹೌದು, ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ಉತ್ಸವ (Hasanamba Utsava) ನಿನ್ನೆ ವಿದ್ಯುಕ್ ತೆರೆ ಕಂಡಿದೆ.
ನವೆಂಬರ್ 2 ರಿಂದ ಶುರುವಾಗಿದ ಈ 14 ದಿನದ ಉತ್ಸವದಲ್ಲಿ ಸಾಹಸ್ರಾರು ಭಕ್ತಾಧಿಗಳು ದೇಶ-ವಿದೇಶಗಳಿಂದಲೂ ಆಗಮಿಸಿ ದೇವಿಯ ದರ್ಶನ ಪಡೆದರು. ಇನ್ನು ಕೇವಲ 12 ದಿನಗಳಲ್ಲಿಯೇ 13 ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸಿ, 5.80 ಕೋಟಿ ರೂ ಆದಾಯ ಹರಿದು ಬಂದಿತ್ತು. ಇಂದು ಬೀಗಿ ಪೊಲೀಸ್ ಬಂದೋಬಸ್ತ್ನಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದು ಮುಕ್ತಾಯವಾಗಿದೆ.
ಹಾಸನಾಂಬೆ ದೇವಿ ಜಾತ್ರಾ ಮಹೋತ್ಸವದ ಇತಿಹಾಸದಲ್ಲೇ ಈ ಬಾರಿ ಗರಿಷ್ಠ ಆದಾಯದ ಮೂಲಕ ದಾಖಲೆ ನಿರ್ಮಾಣವಾಗಿದೆ. ಒಟ್ಟು 8 ಕೋಟಿ 72 ಲಕ್ಷದ 41 ಸಾವಿರದ 531 ರೂ. ದಾಖಲೆಯ ಹಣ ಸಂಗ್ರಹವಾಗಿದೆ. ಅದರಲ್ಲಿ ಕಾಣಿಕೆ ರೂಪದಲ್ಲಿ 62 ಗ್ರಾಂ ಚಿನ್ನ, 161 ಗ್ರಾಂ ಬೆಳ್ಳಿ ಸಂಗ್ರಹವಾದರೆ, ವಿಶೇಷ ದರ್ಶನದ ಸಾವಿರ, ಮುನ್ನೂರು ರೂ. ಟಿಕೆಟ್, ಲಾಡು ಮಾರಾಟದಿಂದಲೇ ಬರೊಬ್ಬರಿ 6 ಕೋಟಿ 17 ಲಕ್ಷದ 34 ರೂ ಸಂಗ್ರಹ, ಇನ್ನು ಹುಂಡಿಯಲ್ಲಿ 2 ಕೋಟಿ 50 ಲಕ್ಷದ 77 ಸಾವಿರದ 497 ರೂಪಾಯಿ ಸಂಗ್ರಹದ ಮೂಲಕ ಒಟ್ಟು 8,72,41,531 ಕೋಟಿ ರೂ. ದಾಖಲೆ ಆದಾಯ ಗಳಿಕೆಯಾಗಿದೆ.