ಬೆಂಗಳೂರು: ಬಿಜೆಪಿ ಮತ್ತು ಜೆಡಿಎಸ್‌ನವರಿಗೆ ಪಾಪ ಏನೂ ಕೆಲಸ ಇಲ್ಲ ಅನಿಸುತ್ತೆ. ಆರೋಪಗಳನ್ನೂ ಮಾಡುವುದನ್ನೇ ಅವರ ಕೆಲಸವಾಗಿ ಮಾಡಿಕೊಂಡಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, “ಬಿಜೆಪಿ ಮತ್ತು ಜೆಡಿಎಸ್‌ನವರಿಗೆ ಪಾಪ ಏನೂ ಕೆಲಸ ಇಲ್ಲ. ಯತೀಂದ್ರ ಅವರು ಕೆಡಿಪಿ ಸದಸ್ಯರಿದ್ದಾರೆ. ಆಶ್ರಯ ಸಮಿತಿ ಅಧ್ಯಕ್ಷರಾಗಿದ್ದಾರೆ. ಜನ ಸಂಪರ್ಕ ಸಭೆ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಕೆಲವು ಶಾಲೆಗಳಿಗೆ ಮೂಲಸೌಲಭ್ಯ ಕಲ್ಪಿಸುವ ವಿಚಾರವಾಗಿ ಯತೀಂದ್ರ ಮಾತನಾಡಿದ್ದಾರೆ” ಎಂದರು.
ಇದನ್ನೂ ಓದಿ: ಭ್ರಷ್ಟಾಚಾರದ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ: ಜಗದೀಶ್ ಶೆಟ್ಟರ್
ಕುಮಾರಸ್ವಾಮಿ ಅವರು ಯತೀಂದ್ರ ಕುರಿತು ಹಂಚಿಕೊಂಡಿರುವ ವಿಡಿಯೋದಲ್ಲಿ ಎಲ್ಲಾದರೂ ವರ್ಗಾವಣೆ ಅಂತ ಪದ ಇದೆಯಾ? ಲಂಚದ ಬಗ್ಗೆ ಎಲ್ಲಿ ಮಾತನಾಡಿದ್ದಾರೆ? ಸುಮ್ಮನೇ ಪ್ರಚಾರ ಮಾಡಿ ನಮ್ಮ ಹುಡುಗನನ್ನು ಲೀಡರ್ ಮಾಡುತ್ತಿದ್ದಾರೆ ಮಾಡಲಿ ಬಿಡಿ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದರು
“ಮಹದೇವ ಎನ್ನುವ ಅಧಿಕಾರಿ ಮೇಲೆ ಸ್ಥಳೀಯರು ಆರೋಪ ಮಾಡಿದ್ದಾರೆ. ಆಶ್ರಯ ಕಮಿಟಿ ಅಧ್ಯಕ್ಷರಿಗೆ, ಬೇರೊಬ್ಬ ಎಂಎಲ್‌ಎಗಳಿಗೆ ಈ ರೀತಿ ಅಧಿಕಾರ ಇರುತ್ತದೆ. ಇದು ಕುಮಾರಸ್ವಾಮಿಗೆ ಅರ್ಥ ಆಗುವುದಿಲ್ಲವಾ” ಎಂದು ಪ್ರಶ್ನಿಸಿ ತಿರುಗೇಟು ನೀಡಿದ್ದಾರೆ.