ಚಿಕ್ಕಬಳ್ಳಾಪುರ: ಅಡುಗೆ ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಮೂವರು ಗಂಭೀರವಾಗಿ ಗಾಯಗೊಂಡು ಅಪಾಯದಿಂದ ಪರಾಗಿದ್ದಾರೆ.
ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಹಿಂಭಾಗದಲ್ಲಿರುವ ಮನೆಯಲ್ಲಿ ಘಟನೆ ನಡೆದಿದ್ದು, ಹರ್ಷಿಯಾ (16), ಹೇಮಾವತಿ (18) ಹಾಗೂ ರಫೀಕ್ (4) ಎಂಬವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ಇವರು ವಾಸಿಸುತ್ತಿರುವ ಮನೆಯೂ ಕೂಡ ಧ್ವಂಸಗೊಂಡಿದೆ.
ಘಟನನೆ ನಡೆದಿದ್ದು ಹೇಗೆ..?
ಮನೆಯಲ್ಲಿ ತಂದೆ ತಾಯಿ ಇಲ್ಲದ ವೇಳೆ ಮಕ್ಕಳು ಸ್ಟೌ ಆನ್ ಮಾಡಲು ಮುಂದಾಗಿದ್ದಾರೆ. ಈ ವೇಳೆ ದುರಂತ ಸಂಭವಿಸಿದೆ. ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿತ್ತು. ಗ್ಯಾಸ್ ಸೋರಿಕೆಯಾಗಿರುವುದರ ಅರಿವಿಲ್ಲದೆ ಮಕ್ಕಳು ಸ್ಟೌ ಹಚ್ಚಿದ್ದಾರೆ. ಆಗ ಏಕಾಏಕಿ ಬೆಂಕಿ ಹೊತ್ತಿಕೊಂಡು ಉರಿದಿದೆ.