Thursday, December 19, 2024

ದೀಪಾವಳಿ ಸಂಭ್ರಮದಲ್ಲಿ ‘ಕಾಟೇರ’ ಬೆಡಗಿ : ಮಗಳ ಜೊತೆ ಮಿಂಚಿದ ‘ಕನಸಿನರಾಣಿ’

ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್​ ಅವರ ಕಾಟೇರ ಚಿತ್ರದ ನಾಯಕನಟಿ ಆರಾಧನಾ ಅವರು ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ.

ಕನಸಿನರಾಣಿ ನಟಿ ಮಾಲಾಶ್ರೀ ಅವರ ಮಗಳಾದ ಆರಾಧನಾ ಅವರು, ಕಾಟೇರ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಗ್ರ್ಯಾಂಡ್​ ಎಂಟ್ರಿ ನೀಡುತ್ತಿದ್ದಾರೆ. ಆರಾಧನಾ ಮನೆಯಲ್ಲಿ ತಾಯಿಯ ಜೊತೆಗೆ ದೀಪಾವಳಿ ಹಬ್ಬವನ್ನು ಸಡಗರದಿಂದ ಆಚರಿಸುತ್ತಿದ್ದಾರೆ.

ದೀಪಾವಳಿ ಪ್ರಯುಕ್ತ ಆರಾಧನಾ ಅವರು ಫೋಟೋಶೂಟ್​ ಸಹ ಮಾಡಿಸಿ ಹೊಸ ಲುಕ್​ನಲ್ಲಿ ಮಿಂಚಿದ್ದಾರೆ. ಮಗಳ ಜೊತೆ ತಾಯಿ ಮಾಲಾಶ್ರೀಯೂ ಫೋಟೋಶೂಟ್​ನಲ್ಲಿ ಕಂಗೊಳಿಸಿದ್ದಾರೆ. ತನ್ನ ಮೊದಲ ಚಿತ್ರದಲ್ಲೇ ನಟ ದರ್ಶನ್​ ಅವರ ಜೊತೆಗೆ ಬಣ್ಣ ಹಚ್ಚುವ ಮೂಲಕ ಆರಾಧನಾ ಸೈ ಎನಿಸಿಕೊಂಡಿದ್ದಾರೆ.

ಕಾಟೇರ್ ಪೋಸ್ಟರ್ ರಿಲೀಸ್

ದೀಪಾವಳಿ ಹಬ್ಬದ ಪ್ರಯುಕ್ತ ಸ್ಯಾಂಡಲ್​ವುಡ್​ ಬಹುನಿರೀಕ್ಷಿತ ಚಿತ್ರ ಕಾಟೇರ ಪೋಸ್ಟರ್ ಅನ್ನು ನಟ ದರ್ಶನ್​ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಅವರು, ‘ಈ ದೀಪಾವಳಿ ನಿಮ್ಮ ಬದುಕಿನಲ್ಲಿ ಖುಷಿಯ ಬೆಳಕನ್ನು ತುಂಬಲಿ. ಈ ಹಬ್ಬ ಸಂತೋಷ, ಸಮೃದ್ಧಿ, ಶಾಂತಿ, ನೆಮ್ಮದಿಯನ್ನು ಹೊತ್ತು ತರಲಿ’ ಎಂದು ತಮ್ಮ ಫ್ಯಾನ್ಸ್​ಗಳಿಗೆ ಶುಭ ಕೋರಿದ್ದಾರೆ.

ಕಾಟೇರ ಚಿತ್ರದ ಟ್ರೇಲರ್​ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಈ ಚಿತ್ರವನ್ನು ತರುಣ್​ ಸುಧೀರ್ ನಿರ್ದೇಶಿಸಿದ್ದು, ರಾಕ್​ ಲೈನ್ ವೆಂಕಟೇಶ್​ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಈ ವರ್ಷಾಂತ್ಯದಲ್ಲಿ ಡಿ ಬಾಸ್ ತನ್ನ ಅಭಿಮಾನಿಗಳಿಗೆ ಬೆಳ್ಳಿ ತೆರೆಯ ಮೇಲೆ ದರ್ಶನ ಕೊಡಲಿದ್ದಾರೆ.

RELATED ARTICLES

Related Articles

TRENDING ARTICLES