Friday, November 22, 2024

ಇಂದು ಶಂಕರ್‌ನಾಗ್ ಗೆ 69 ನೇ ಜನ್ಮದಿನದ ಸಂಭ್ರಮ!

ಬೆಂಗಳೂರು: ಇಂದು ಸ್ಯಾಂಡಲ್‌ವುಡ್ ನಟ, ನಿರ್ದೇಶಕ ಶಂಕರ್‌ ನಾಗ್ ಜನ್ಮದಿನ. 1954ರ ನವೆಂಬರ್ 9 ರಂದು ಹೊನ್ನಾವರದ ನಾಗರಕಟ್ಟೆಯಲ್ಲಿ ಜನಿಸಿದ್ದರು ಶಂಕರ್‌ ನಾಗ್. ನಟ, ನಿರ್ದೇಶಕ, ಬರಹಗಾರ, ನಿರ್ಮಾಪಕ ಹೀಗೆ ಬಹಳಷ್ಟು ದಾರಿಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು.

ದಿವಂಗತ ಶಂಕರ್ ನಾಗ್. ಅವರ ಜನ್ಮದಿನವನ್ನು “ಆಟೋ ರಿಕ್ಷಾ ಡೇ” ಅಂತ ನಮ್ಮ ಕರ್ನಾಟಕ ಆಟೋ ಚಾಲಕರ ಸಂಘ ಆಚರಣೆ ಮಾಡುತ್ತದೆ. ಇದು ಶಂಕರ್ ನಾಗ್ ಅವರಿಗೆ ಸಲ್ಲಿಸುವ ನಿಜವಾದ ಗೌರವವೂ ಹೌದು. ಡಾ ರಾಜ್ ಕುಮಾರ್ ನಟನೆಯ ಒಂದು ಮುತ್ತಿನ ಕಥೆ ಮೂಲಕ ನಟ, ನಿರ್ದೇಶಕ ಶಂಕರ್ ನಾಗ್ ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಮೈಲಿಗಲ್ಲನ್ನು ಸ್ಥಾಪಿಸಿದರು.

ಇದನ್ನೂ ಓದಿ: ಕ್ಷುಲ್ಲಕ ಕಾರಣಕ್ಕೆ ಹೆಲ್ಮೆಟ್​ ನಿಂದ ಹೊಡೆದು ವ್ಯಕ್ತಿಯ ಭೀಕರ ಕೊಲೆ!

ಒಂದು ಮುತ್ತಿನ ಕಥೆಯಲ್ಲಿ ನಿರ್ದೇಶನದ ಜತೆ ನಟನೆ ಕೂಡ ಮಾಡುವ ಮೂಲಕ ಶಂಕರ್‌ ನಾಗ್ ತಮ್ಮ ಪ್ರತಿಭೆ ಏನೆಂಬುದನ್ನು ಇಡೀ ಭಾರತಕ್ಕೇ ತೋರಿಸಿದ್ದರು. ಒಂದು ಮುತ್ತಿನ ಕಥೆ ಚಿತ್ರ ಅಂದುಕೊಂಡಷ್ಟು ಗೆಲುವು ಸಾಧಿಸದಿದ್ದರೂ, ಶಂಕರ್‌ ನಾಗ್ ಅವರು ಅಂದು ತಮ್ಮ ಸಿನಿಮಾದಲ್ಲಿ ತೋರಿಸಿದ್ದ ತಂತ್ರಜ್ಞಾನವನ್ನು ಕಂಡು ಇಡೀ ಸಿನಿಮಾರಂಗ ಮೂಗಿನ ಮೇಲೆ ಬೆರಳಿಟ್ಟುಕೊಂಡಿತ್ತು.

ಕನ್ನಡ ಚಿತ್ರರಂಗವನ್ನು ಜಗತ್ತಿನಲ್ಲೇ ಅತೀ ಎತ್ತರಕ್ಕೆ ಒಯ್ಯುವ ಕನಸು ಹೊಂದಿದ್ದ ಶಂಕರ್‌ ನಾಗ್​ ಅವರು ಅದನ್ನು ಸಾಧಿಸುವ ಮೊದಲೇ ಇಹಲೋಕ ತ್ಯಜಿಸಿದ್ದು ಅತ್ಯಂತ ದುಃಖಕರ ಸಂಗತಿ. ಆದರೆ, ದಿವಂಗತ ಶಂಕರ್‌ ನಾಗ್ ಕಂಡಿದ್ದ ಕನಸು ನಿಧಾನವಾಗಿ ಅವರ ಮುಂದಿನ ಪೀಳಿಗೆ ಮೂಲಕ ಈಡೇರುತ್ತಿದೆ ಎಂದು ಹೇಳಬಹುದು.

ಶಂಕರ್ ಅಂದುಕೊಂಡಂತೆ ಇಂದು ಕನ್ನಡ ಚಿತ್ರರಂಗವನ್ನು ಜಗತ್ತೇ ಗುರುತಿಸಿದೆ, ಗಮನಿಸುತ್ತಿದೆ. ಶಂಕರ್‌ ನಾಗ್ ಅವರು ತೀರಿಕೊಂಡು ಬರೋಬ್ಬರಿ 33 ವರ್ಷಗಳು ಕಳೆದಿದ್ದರೂ ಇಂದಿಗೂ ಕೂಡ ಚಿತ್ರಂಗ ಸೇರಿದಂತೆ, ಕರ್ನಾಟಕದ ಜನತೆ ಅವರನ್ನು ಸ್ಮರಿಸುತ್ತದೆ. ಈ ಮೂಲಕ, ದಿವಂಗತ್ ಶಂಕರ್‌ ನಾಗ ಅವರಿಗೊಂದು ನಮನ.

RELATED ARTICLES

Related Articles

TRENDING ARTICLES