ನವರಾತ್ರಿ ಮುಗಿದು ಇನ್ನೇನು ಕೆಲವೇ ದಿನಗಳಲ್ಲಿ ದೀಪದ ಹಬ್ಬ ದೀಪಾವಳಿ ಹಬ್ಬ ಆರಂಭವಾಗುತ್ತದೆ. ಈ ಹಬ್ಬವು ಅಜ್ಞಾನವನ್ನು ಕಳೆದು ಜ್ಞಾನ, ಕೆಡುಕಿನ ಮೇಲೆ ಒಳ್ಳೆಯ ಮತ್ತು ಹತಾಶೆಯ ಮೇಲೆ ಭರವಸೆಯ ವಿಜಯವನ್ನು ಸಂಕೇತಿಸುವ ಹಬ್ಬವಾಗಿದೆ ಎಂದು ಸಿದ್ಧಲಿಂಗೇಶ್ವರ ಗದ್ದುಗೆ ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.
ದೀಪಾವಳಿ ಹಬ್ಬದ ಮಹತ್ವ, ಪೂಜಾ ವಿಧಾನ, ಮುಹೂರ್ತಗಳ ಯಾವಗ ಎಂದು ಪವರ್ ಟಿವಿಗೆ ಶ್ರೀಗಳು ಮಾಹಿತಿ ನೀಡಿದ್ದಾರೆ.
ಹಬ್ಬದ ಮಹತ್ವ
ಭಗವಾನ್ ಕೃಷ್ಣನಿಂದ ನರಕಾಸುರನಂತಹ ಅನೇಕ ರಾಕ್ಷಸರ ವಧೆ, ರಾವಣನನ್ನು ಕೊಂದ ನಂತರ ಅಯೋಧ್ಯೆಗೆ ಭಗವಾನ್ ರಾಮನ ಆಗಮನ ಮತ್ತು ಬಲಿಯನ್ನು ವಾಮನ ಸೋಲಿಸಿದ ದಿನ ಹೀಗೆ ಈ ದೀಪಾವಳಿ ಹಬ್ಬವನ್ನು ಹಲವಾರು ಕಾರಣಕ್ಕೆ ಆಚರಿಸಲಾಗುತ್ತದೆ. ಜನರು ಲಕ್ಷ್ಮೀಯನ್ನು ಮಾಡುವ ಮೂಲಕ ದೀಪಾವಳಿಯಂದು ದೇವಿಯನ್ನು ಪ್ರಾರ್ಥಿಸುತ್ತಾರೆ. ಸಮೃದ್ಧಿ, ಸಂತೋಷ, ಶಾಂತಿ ಮತ್ತು ಸಂಪತ್ತನ್ನು ಆಶೀರ್ವದಿಸುವಂತೆ ಕೇಳಿಕೊಳ್ಳುತ್ತಾರೆ. ದೇಶದ ಬಹುತೇಕ ಸ್ಥಳಗಳಲ್ಲಿ ದೀಪಾವಳಿಯನ್ನು ಐದು ದಿನಗಳ ಕಾಲ ಆಚರಿಸಲಾಗುತ್ತದೆ. ಇನ್ನೂ ಕೆಲವು ಕಡೆ ಮೂರು ದಿನಗಳ ಕಾಲ ಆಚರಿಸಲಾಗುತ್ತದೆ.
ದೀಪಾವಳಿ ಪೂಜಾ ಮುಹೂರ್ತಗಳು
- 09-11-2023-ಗುರುವಾರ-ಏಕಾದಶಿ – ಗೋವತ್ಸ ದ್ವಾದಶಿ
- 10-11-2023 ಶುಕ್ರವಾರ- ದ್ವಾದಶಿ ಯಮ ದೀಪ ದಾನ, ಧನ ತ್ರಯೋದಶಿ, ಧನ್ವಂತರಿ ಪ್ರಯೋದಶಿ
- 11-11-2023, ಶನಿವಾರ – ತ್ರಯೋದಶಿ ಕಾಳಿ ಪೂಜೆ, ಹನುಮಾನ್ ಪೂಜೆ, ಕಿರುದೀಪಾವಳಿ ಆಚರಣೆ, ನೀರುತುಂಬುವ ಹಬ್ಬ
- 12-11-2023, 20 ಚತುರ್ದಶಿ – ನರಕ ಚತುರ್ದಶಿ, ಶಾರದಾ ಪೂಜೆ, ಅಭ್ಯಂಗಸ್ನಾನ.
- 13-11-2023, ಸೋಮವಾರ – ಅಮಾವಾಸ್ಯೆ ಅಭ್ಯಂಗ ಪುಣ್ಯಸ್ನಾನ, ಕುಬೇರ ಮಹಾಲಕ್ಷ್ಮಿ ಪೂಜೆ, ಶ್ರೀಮಹಾಲಕ್ಷ್ಮೀನಾರಾಯಣ ಪೂಜೆ, ಗಜಲಕ್ಷ್ಮಿ ನಾರಾಯಣ ಪೂಜೆ ಶ್ರೀ ಕುಬೇರಮಹಾಲಕ್ಷ್ಮೀ ಪೂಜಾ ಮುಹೂರ್ತ ಕಳಶ ಸ್ಥಾಪನೆ ಬೆಳಗಿನಜಾವ 04:10 ರಿಂದ 5:50 ಬೆಳಿಗ್ಗೆ 06:08 ರಿಂದ 07:05 ಪೂಜೆ ಮಾಡಬಹುದು.
ದೀಪಾರಾಧನೆ (ಮಹಾಕುಬೇರ ಆರಾಧನೆ)
ಸಂಜೆ 4:35 ರಿಂದ 5:58ಕ್ಕೆ ,ಸಂಜೆ 06:10 ರಿಂದ ರಾತ್ರಿ 08:35ಕ್ಕೆ ರಾತ್ರಿ 09:05 ರಿಂದ 10:58 ನಂತರ ಸಿಂಹ ಲಗ್ನದಲ್ಲಿ ಆರಾಧನೆ ಮಾಡಬಹುದು.
- 14-11-2023, ಮಂಗಳವಾರ – ಬಲಿಪಾಡ್ಯಮಿ ಗೋವರ್ಧನ ಪೂಜೆ ಮಾಡಬೇಕು.