ಬೆಂಗಳೂರು: ಜಾತಿಗಣತಿ ವರದಿಗೆ ವಿರೋಧ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಒಕ್ಕಲಿಗರ ಬಳಿಕ ಲಿಂಗಾಯತರ ಸಭೆ ನಡೆಯಲಿದ್ದು, ಜಾತಿಗಣತಿ ಬಗ್ಗೆ ಸ್ಪಷ್ಟ ನಿಲುವು ತೆಗೆದುಕೊಳ್ಳುಲು ನಿರ್ಧರಿಸಿದ್ದಾರೆ.
ಸಭೆಯಲ್ಲಿ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು, ಪ್ರಧಾನ ಕಾರ್ಯದರ್ಶಿ ಈಶ್ವರ್ ಖಂಡ್ರೆ ಸೇರಿ ಹಲವರು ಭಾಗಿಯಾಗಲಿದ್ದು, ಸರ್ಕಾರಕ್ಕೆ ಹೊಸ ಸಮೀಕ್ಷೆ ನಡೆಸಿ ನಿರ್ಣಯ ಮಾಡುವಂತೆ ಒತ್ತಾಯಿಸುವ ಸಾಧ್ಯತೆಯಿದೆ. ಇನ್ನು, ಇತ್ತ ಜಾತಿ ಗಣತಿ ವರದಿ ಜಾರಿಗೆ ಸರ್ಕಾರ ಚಿಂತನೆ ನಡೆಸಿದ್ದು, ಬೆಳಗಾವಿ ಅಧಿವೇಶನದಲ್ಲಿ ವರದಿ ಮಂಡನೆಗೆ ನಿರ್ಧಾರ ಮಾಡಲಾಗಿದೆ.
ಇದನ್ನೂ ಓದಿ: BBK 10: ಬದಲಾಯ್ತು ವೇಷ; ಮತ್ತೆ ಶುರುವಾಯ್ತು ‘ತುಕಾಲಿ’ ಹಾಸ್ಯ
ವರದಿ ಜಾರಿಗೆ ಒಬಿಸಿ, ದಲಿತ ಸಮುದಾಯಗಳ ಒತ್ತಾಯಿಸಿದ್ದು, ಲಿಂಗಾಯತ ಹಾಗೂ ಒಕ್ಕಲಿಗರು ಜಾತಿಗಣತಿ ಜಾರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಸದ್ಯ ಹಲವು ಕುತೂಹಲಕ್ಕೆ ಕಾರಣವಾಗಿದೆ ಜಾತಿಗಣತಿ ವರದಿ, ಇದೇ ನವೆಂಬರ್‌ನಲ್ಲಿ ಒಬಿಸಿ ಆಯೋಗದಿಂದ ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ.