Wednesday, December 18, 2024

ಆರ್.ಡಿ ಪಾಟೀಲ್‌ ತಪ್ಪಿಸಿಕೊಳ್ಳಲು ಮಂತ್ರಿಗಳ ಸಹಕಾರವಿದೆ : ಶಾಸಕ ಬಿ.ವೈ.ವಿಜಯೇಂದ್ರ

ಕಲಬುರಗಿ : ಕೆಇಎ ಪರೀಕ್ಷಾ ಅಕ್ರಮ (KEA Exam Scam) ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಂಗ್‌ಪಿನ್ ಆರ್‌ಡಿ ಪಾಟೀಲ್ ತಪ್ಪಿಸಿಕೊಳ್ಳಲು ಮಂತ್ರಿಗಳ ಸಹಕಾರವಿದೆ ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು ಕಿಂಗ್​ಪಿನ್​ಗಳಿಗೆ ಕಾಂಗ್ರೆಸ್ ಪಕ್ಷದಲ್ಲಿ ಶ್ರೀರಕ್ಷೆ ಇದೆ. IPS ಅಧಿಕಾರಿಗಳಿಗೆ ಮಾಹಿತಿ ಇದ್ರೂ ಕೂಡ ಬಂಧಿಸಲು ಆಗಲಿಲ್ಲ. ಸರ್ಕಾರ ಪ್ರಮುಖ ಹುದ್ದೆಯಲ್ಲಿರೋರಿಂದಲೇ ಬೆಂಬಲ ಇಲ್ಲ ಇಡೀ ಕಾಂಗ್ರೆಸ್‌ ಪಕ್ಷವೇ ಇಂತಹ ವ್ಯಕ್ತಿಗಳಿಗಾಗಿಯೇ ಆಗಿದೆ.

ಇದನ್ನೂ ಓದಿ: ಕೆಇಎ ಪರೀಕ್ಷೆ ಅಕ್ರಮ: ಕಾಂಪೌಂಡ್ ಹಾರಿ ಕಿಂಗ್‌ಪಿನ್ ಆರ್.ಡಿ ಪಾಟೀಲ್ ಪರಾರಿ

ಸರ್ಕಾರದ ಆಡಳಿತ ಪಕ್ಷದಲ್ಲಿ ಘಟಾನುಘಟಿ ನಾಯಕರ ಸಂಪರ್ಕವಿದೆ. ಅವರ ಬೆಂಬಲದಿಂದಲೇ ಕಣ್ತಪ್ಪಿಸಿ ಪರಾರಿ ಆಗಿದ್ದಾನೆ. ಸಿಬಿಐ ತನಿಖೆ ಆದ್ರೆ ಮಾತ್ರವೇ ಸತ್ಯ ಹೊರಬರಲು ಸಾಧ್ಯವಾಗುತ್ತದೆ ಎಂದು ಶಾಸಕ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES