ನವದೆಹಲಿ : ರಾಷ್ಟ್ರ ರಾಜಧಾನಿಯಲ್ಲಿ ಹೆಚ್ಚುತ್ತಿರುವ ಮಾಲಿನ್ಯವನ್ನು ಗಮನದಲ್ಲಿಟ್ಟುಕೊಂಡು, ಅರವಿಂದ್ ಕೇಜ್ರಿವಾಲ್ ಸರ್ಕಾರ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಸಮ-ಬೆಸ ಸಂಖ್ಯೆಗಳ ವಾಹನ ಸಂಚಾರ ನಿಯಮ ಜಾರಿಗೆ ಮುಂದಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಮಿತಿಮೀರಿದೆ. ಮಾಲಿನ್ಯ ತಡೆಗೆ ಸರ್ಕಾರ ನಾನಾ ಕಸರತ್ತು ಮಾಡುತ್ತಿದೆ. ಇದರ ಮುಂದುವರಿದ ಭಾಗವಾಗಿ ಸಮ ಬೆಸ ಸಂಖ್ಯೆಗಳ ವಾಹನ ಸಂಚಾರ ನಿಯಮ ಜಾರಿಗೆ ಮುಂದಾಗಿದೆ. ದೀಪಾವಳಿಯ ಮರುದಿನದಿಂದ ವಾಹನ ಸಂಚಾರ ನಿಯಮಗಳಲ್ಲಿ ಭಾರೀ ಬದಲಾವಣೆಯಾಗಲಿದೆ.
- ರಾಷ್ಟ್ರ ರಾಜಧಾನಿಯಲ್ಲಿ ಮಿತಿಮೀರಿದ ಮಾಲಿನ್ಯ
- ದೆಹಲಿಯಲ್ಲಿ ಮತ್ತೆ ಸಮ-ಬೆಸ ನಿಯಮ ಜಾರಿ
- ನವೆಂಬರ್ 13 ರಿಂದ 20 ರವರೆಗೆ ಹೊಸ ನಿಯಮ
- ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್?
- ನವೆಂಬರ್ 10ರವರೆಗೆ ಆನ್‌ಲೈನ್ ಕ್ಲಾಸ್?
ದೀಪಾವಳಿ ನಂತರ ದೆಹಲಿಯಲ್ಲಿ ಮಾಲಿನ್ಯದ ಮಟ್ಟ ಹೆಚ್ಚಾಗಬಹುದು. ಹೀಗಾಗಿ ಒಂದು ವಾರದ ಬೆಸ-ಸಮ ಸೂತ್ರವನ್ನು ದೀಪಾವಳಿಯ ಮರುದಿನ ಜಾರಿಗೆ ತರಲಾಗುವುದು. ನವೆಂಬರ್ 13 ರಿಂದ 20ರವರೆಗೆ ಸಮ-ಬೆಸ ನಿಯಮ ಅನ್ವಯವಾಗಲಿದೆ. ಈ ಹಿಂದೆ, ನಿರಂತರವಾಗಿ ಹದಗೆಡುತ್ತಿರುವ ಗಾಳಿಯ ಗುಣಮಟ್ಟದಿಂದಾಗಿ, ಜಿಆರ್‌ಇಪಿಯ ನಾಲ್ಕನೇ ಹಂತವನ್ನು ದೆಹಲಿ-ಎನ್‌ಸಿಆರ್‌ನಲ್ಲಿ ಜಾರಿಗೊಳಿಸಲಾಯಿತು.ಮಾಲಿನ್ಯ ತಗ್ಗಿಸಲು ನಿಯಮಿತವಾಗಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ದೆಹಲಿಯ ಪರಿಸರ ಸಚಿವ ಗೋಪಾಲ್ ರೈ ತಿಳಿಸಿದ್ದಾರೆ.
BS-3 ಪೆಟ್ರೋಲ್ ವಾಹನಗಳು ಮತ್ತು BS-4 ಡೀಸೆಲ್ ವಾಹನಗಳ ಮೇಲೆ ವಿಧಿಸಲಾದ ನಿಷೇಧವು ಗ್ರಾಪಂ-4ರಲ್ಲೂ ಮುಂದುವರಿಯುತ್ತದೆ. ದೆಹಲಿಯಲ್ಲಿ ಎಲ್‌ಎನ್‌ಜಿ, ಸಿಎನ್‌ಜಿ ಮತ್ತು ಎಲೆಕ್ಟ್ರಿಕ್ ಟ್ರಕ್‌ಗಳು ಮತ್ತು ಅಗತ್ಯ ಸೇವೆಗಳ ವಾಹನಗಳನ್ನು ಹೊರತುಪಡಿಸಿ ಇತರ ಟ್ರಕ್‌ಗಳ ಪ್ರವೇಶಕ್ಕೆ ನಿಷೇಧವಿದೆ. ಇದಲ್ಲದೇ, ಗ್ರಾಪಂ-3ರಲ್ಲಿ ಮೇಲ್ಸೇತುವೆ ಹಾಗೂ ವಿದ್ಯುತ್ ಪ್ರಸರಣ ಪೈಪ್‌ಲೈನ್‌ಗಳನ್ನು ಕೆಡುವ ಕಾಮಗಾರಿಗೆ ವಿನಾಯಿತಿ ನೀಡಲಾಗಿದೆ. ಆದಾಗ್ಯೂ, ಈಗ ಅವುಗಳನ್ನು ಸಹ ನಿಷೇಧಿಸಲಾಗಿದೆ.
ವರ್ಕ್ ಫ್ರಮ್ ಹೋಮ್?
ಇನ್ನೊಂದೆಡೆ ದೆಹಲಿಯಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ಸರ್ಕಾರ ಮತ್ತೊಂದು ನಿಯಮಕ್ಕೆ ಮುಂದಾಗಿದೆ. ವಾಹನ ದಟ್ಟಣೆ ಕಡಿಮೆ ಮಾಡಲು ಸರ್ಕಾರಿ, ಖಾಸಗಿ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಆದೇಶ ನೀಡಲು ಚಿಂತನೆ ನಡೆಸಲಾಗಿದೆ. ಅಲ್ಲದೆ, ವಿವಿಧ ತರಗತಿಗಳಿಗೆ ಆನ್‌ಲೈನ್ ಕ್ಲಾಸ್ ಆದೇಶಕ್ಕೂ ಚಿಂತನೆ ನಡೆಸಲಾಗಿದೆ. ಅಲ್ಲದೆ, ಅದೇ ಸಮಯದಲ್ಲಿ,10 ಮತ್ತು 12ನೇ ತರಗತಿಗಳನ್ನು ಹೊರತುಪಡಿಸಿ ಉಳಿದೆಲ್ಲ ತರಗತಿಗಳನ್ನು ನವೆಂಬರ್ 10ರವರೆಗೆ ಅಮಾನತುಗೊಳಿಸುವಂತೆ ಶಾಲೆಗಳಿಗೆ ಸೂಚನೆ ನೀಡಲಾಗಿದೆ.
ಒಟ್ಟಾರೆ, ರಾಷ್ಟ್ರ ರಾಜಧಾನಿಯಲ್ಲಿ ಮಿತಿಮೀರುತ್ತಿರುವ ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಸರ್ಕಾರ ಮುಂದಾಗಿದೆ. ಮತ್ತೆ ಸಂಚಾರ ನಿಯಮ ಬದಲಾವಣೆಗೆ ನಿರ್ಧರಿಸಿದೆ. ಸಮ ಬೆಸ ಸಂಖ್ಯೆಯ ವಾಹನಗಳ ಸಂಚಾರ ನಿಯಮ ಜಾರಿಗೆ ಮುಂದಾಗಿದೆ. ಆದರೆ, ಈ ನಿಯಮ ಎಷ್ಟರ ಮಟ್ಟಿಗೆ ವರ್ಕೌಟ್ ಆಗಲಿದೆ ಎಂಬುದನ್ನು ಕಾದು ನೋಡಬೇಕಿದೆ.